ಇಂಡೋನೇಶ್ಯದಲ್ಲಿ ಮತ್ತೆ ಭೂಕಂಪ; 13 ಸಾವು
ಮಟರಮ್ (ಇಂಡೋನೇಶ್ಯ), ಆ. 20: ಇಂಡೋನೇಶ್ಯದ ಲೊಂಬೊಕ್ ಮತ್ತು ಸುಂಬಾವೆ ದ್ವೀಪಗಳಲ್ಲಿ ಸಂಭವಿಸಿದ ಸರಣಿ ಭೂಕಂಪಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.
ಈ ವಲಯದಲ್ಲಿ ಈ ತಿಂಗಳ ಆದಿ ಭಾಗದಲ್ಲಿ ಸಂಭವಿಸಿದ ಪ್ರಬಲ ಸರಣಿ ಭೂಕಂಪಗಳಿಂದ ಜನರು ಚೇತರಿಸಿಕೊಳ್ಳುತ್ತಿರುವಂತೆಯೇ ಹೊಸದಾಗಿ ಭೂಮಿ ಕಂಪಿಸಿದೆ. ಆ ಭೂಕಂಪಗಳಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಲೊಂಬೊಕ್ ದ್ವೀಪದ ಈಶಾನ್ಯ ಭಾಗದಲ್ಲಿ ರವಿವಾರ ರಾತ್ರಿ ಸುಮಾರು 10 ಗಂಟೆಗೆ ಸಮುದ್ರದ ಮೇಲ್ಪದರದಲ್ಲಿ 6.9ರ ತೀವ್ರತೆಯ ಭೂಕಂಪ ಸಂಭವಿಸಿತು. ಅದರ ಬಳಿಕ ಹಲವು ಪಶ್ಚಾತ್ ಕಂಪನಗಳು ಸಂಭವಿಸಿದವು.
Next Story