ಇರಾನ್ ನಲ್ಲಿ ಭೂಕಂಪ; 1 ಸಾವು, ನೂರಾರು ಮಂದಿಗೆ ಗಾಯ
ಟೆಹ್ರಾನ್ , ಆ. 26: ಪಶ್ಚಿಮ ಇರಾನ್ ನಲ್ಲಿ ಸಂಭವಿಸಿದ ಸರಣಿ ಭೂಕಂಪದಿಂದಾಗಿ ಓರ್ವ ಮೃತಪಟ್ಟು , ನೂರಾರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ರವಿವಾರ ಬೆಳಗ್ಗಿನ ಜಾವ ಇರಾನ್ ನ ಕೆರ್ಮಾನ್ ಶಾಹ್ ಪ್ರಾಂತ್ಯದ ಜಾವನ್ ರುಡ್ ನಗರದಲ್ಲಿ ಎರಡು ಬಾರಿ ಭೂ ಕಂಪನ ಉಂಟಾಯಿತು. ರಿಕ್ಟರ್ ಮಾಪಕದಲ್ಲಿ 4.4 ಮತ್ತು 4.2 ತೀವ್ರತೆ ದಾಖಲಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 70 ವರ್ಷದ ವ್ಯಕ್ತಿಯೊಬ್ಬರು ಭೂಕಂಪದ ವೇಳೆ ಹೃದಯಾಘಾತದಿಂದ ಮೃತಪಟ್ಟರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ನಲ್ಲಿ ನವೆಂಬರ್ 2017 ರಲ್ಲಿ 7.3 ತೀವ್ರತೆಯ ಭೂಕಂಪನವು ಒಂದೇ ಪ್ರದೇಶದಲ್ಲಿ ಸಂಭವಿಸಿ 530 ಜನ ಸಾವಿಗೀಡಾಗಿದ್ದರು. ಸಹಸ್ರಾರು ಮಂದಿ ಗಾಯಗೊಂಡಿದ್ದರು.
Next Story