ಗಾಝಾಪಟ್ಟಿ ಜೊತೆಗಿನ ಗಡಿದಾಟು ತೆರೆದ ಇಸ್ರೇಲ್
ಜೆರುಸಲೇಮ್, ಆ. 27: ಗಾಝಾ ಪಟ್ಟಿಯೊಂದಿಗಿನ ಏಕೈಕ ಗಡಿದಾಟನ್ನು ಇಸ್ರೇಲ್ ಸೋಮವಾರ ತೆರೆದಿದೆ.
ಗಾಝಾ ಪಟ್ಟಿಯೊಂದಿಗಿನ ಗಡಿಯಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಅದು ಗಡಿದಾಟನ್ನು ಒಂದು ವಾರದ ಹಿಂದೆ ಮುಚ್ಚಿತ್ತು.
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ದೀರ್ಘಾವಧಿ ರಾಜಿ ಏರ್ಪಡಿಸಲು ಈಜಿಪ್ಟ್ ನಡೆಸುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿತ್ತು. ಫೆಲೆಸ್ತೀನ್ ಅಧಿಕಾರಿಗಳೊಂದಿಗೆ ಈಜಿಪ್ಟ್ ನಡೆಸಿದ ಮಾತುಕತೆಗಳ ಬಳಿಕ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಇಸ್ರೇಲ್ ಗಡಿದಾಟನ್ನು ತೆರವುಗೊಳಿಸಿದೆ.
ಕಳೆದ ವಾರದಲ್ಲಿ ಶಾಂತಿ ಏರ್ಪಟ್ಟ ಹಿನ್ನೆಲೆಯಲ್ಲಿ ‘ಎರೆಝ್’ ಗಡಿದಾಟನ್ನು ತೆರೆಯಲಾಗುತ್ತಿದೆ ಎಂಬುದಾಗಿ ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡರ್ ಲೈಬರ್ಮನ್ ರವಿವಾರ ರಾತ್ರಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
Next Story