ರೊಹಿಂಗ್ಯಾ ‘ಜನಾಂಗೀಯ ಹತ್ಯೆ’ ವರದಿಯನ್ನು ತಿರಸ್ಕರಿಸಿದ ಮ್ಯಾನ್ಮಾರ್
ಯಾಂಗನ್, ಆ. 29: ರೊಹಿಂಗ್ಯಾ ಮುಸ್ಲಿಮ್ ಸಮುದಾಯದ ವಿರುದ್ಧ ತನ್ನ ಸೇನೆ ಜನಾಂಗೀಯ ಹತ್ಯೆ ಅಭಿಯಾನ ನಡೆಸಿದೆ ಎಂದು ಹೇಳುವ ವಿಶ್ವಸಂಸ್ಥೆ ತನಿಖಾ ವರದಿಯನ್ನು ಮ್ಯಾನ್ಮಾರ್ ಬುಧವಾರ ತಿರಸ್ಕರಿಸಿದೆ.
‘‘ವಿಶ್ವಸಂಸ್ಥೆಯ ಸತ್ಯ ಶೋಧನಾ ತಂಡಕ್ಕೆ ಮ್ಯಾನ್ಮಾರ್ ಪ್ರವೇಶಿಸಲು ನಾವು ಅನುಮತಿ ನೀಡಿಲ್ಲ. ಹಾಗಾಗಿ, ಮಾನವ ಹಕ್ಕುಗಳ ಮಂಡಳಿಯ ಯಾವುದೇ ನಿರ್ಣಯಗಳನ್ನು ನಾವು ಒಪ್ಪುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ’’ ಎಂದು ಸರಕಾರಿ ವಕ್ತಾರ ಝಾವ್ ಹಟಯ್ ಹೇಳಿದ್ದಾರೆ ಎಂದು ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ ತಿಳಿಸಿದೆ.
Next Story