ಅಲೆಪ್ಪೊದಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ಕೆಎಸ್ರಿಲೀಫ್
ಜಿದ್ದಾ, ಸೆ. 2: ಸಿರಿಯದ ಅಲೆಪ್ಪೊ ರಾಜ್ಯದ ಉತ್ತರದ ಗ್ರಾಮೀಣ ಭಾಗದಲ್ಲಿ ಮನೆಗಳನ್ನು ಪುನರ್ನಿರ್ಮಿಸುವ ಯೋಜನೆಯೊಂದನ್ನು ಸೌದಿ ಅರೇಬಿಯದ ‘ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ’ (ಕೆಎಸ್ರಿಲೀಫ್) ಕೈಗೆತ್ತಿಕೊಂಡಿದೆ.
ಅಲೆಪ್ಪೊದಲ್ಲಿ 495 ಮನೆಗಳ ನವೀಕರಣ ಮತ್ತು ಪುನರ್ವಸತಿಯನ್ನು ಅದು ಈಗಾಗಲೇ ಆರಂಭಿಸಿದೆ. ಅದೇ ವೇಳೆ, ಅದು ಎರಡು ಸಾರ್ವಜನಿಕ ಆಶ್ರಯ ಕೇಂದ್ರಗಳು ಮತ್ತು 16 ಮನರಂಜನಾ ಕೇಂದ್ರಗಳನ್ನೂ ನಿರ್ಮಿಸಲಿದೆ.
ಅಲೆಪ್ಪೊ ರಾಜ್ಯದ ಮಾರ ಪಟ್ಟಣದಲ್ಲಿ ವಿಧವೆಯರು, ಅನಾಥರು ಮತ್ತು ವಿಶೇಷ ಗಮನ ಅಗತ್ಯವಿರುವ ಜನರ 500 ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್ಗಳನ್ನು ಒದಗಿಸಿದೆ.
Next Story