ಅಮೆರಿಕ ಮಧ್ಯಂತರ ಚುನಾವಣಾ ಕಣದಲ್ಲಿ 12 ಭಾರತೀಯರು
ವಾಶಿಂಗ್ಟನ್, ಸೆ. 20: ಅಮೆರಿಕದ ಸಂಸತ್ತು ಕಾಂಗ್ರೆಸ್ಗೆ ನವೆಂಬರ್ 6ರಂದು ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ದಾಖಲೆಯ 12 ಭಾರತೀಯ-ಅಮೆರಿಕನ್ನರು ಸ್ಪರ್ಧಿಸುತ್ತಿದ್ದಾರೆ.
ಅವರ ಪೈಕಿ ಮೂವರು ಮಹಿಳೆಯರು. ಅವರೆಂದರೆ- ಆ್ಯರಿರೆನದ ಹಿರಾಲ್ ತಿಪಿರ್ನೇನಿ ಮತ್ತು ಅನಿತಾ ಮಲಿಕ್ ಹಾಗೂ ವಾಶಿಂಗ್ಟನ್ ರಾಜ್ಯದ ಪ್ರಮೀಳಾ ಜಯಪಾಲ್.
ಇಲಿನಾಯಿಸ್ನಿಂದ ರಾಜಾ ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯದಿಂದ ರೋ ಖನ್ನಾ ಮತ್ತು ಡಾ. ಅಮಿ ಬೇರ ಕೂಡ ಕಣದಲ್ಲಿದ್ದಾರೆ.
ಕೃಷ್ಣಮೂರ್ತಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಭಾರತೀಯ ಅಮೆರಿಕನ್ ಜಿತೇಂದರ್ ದಿಗನ್ವೇಕರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
Next Story