ಬಹರೈನ್ನಲ್ಲಿ ವ್ಯಾಟ್ ಜಾರಿ: ಕರಡು ಮಸೂದೆ ಅಂಗೀಕರಿಸಿದ ಸಂಸದರು
ದುಬೈ, ಅ. 8: ಬಹರೈನ್ನಲ್ಲಿ ಮೊದಲ ಬಾರಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯನ್ನು ಜಾರಿಗೊಳಿಸಲಾಗಿದ್ದು, ಈ ಸಂಬಂಧದ ಕರಡು ಮಸೂದೆಯನ್ನು ಸಂಸದರು ರವಿವಾರ ಅಂಗೀಕರಿಸಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಬಿಎನ್ಎ ವರದಿ ಮಾಡಿದೆ.
ವ್ಯಾಟ್ ಜಾರಿಗೆ ಸಂಬಂಧಿಸಿದ ‘ಕೊಲ್ಲಿ ಅರಬ್ ಒಪ್ಪಂದ’ವನ್ನು ಪ್ರತಿನಿಧಿಗಳ ಸದನ ಅಂಗೀಕರಿಸಿದೆ ಎಂದು ಅದು ತಿಳಿಸಿದೆ. ಇದಕ್ಕೂ ಮೊದಲು, ಈ ವಿಷಯದಲ್ಲಿ ರವಿವಾರ ವಿಶೇಷ ಅಧಿವೇಶನ ನಡೆಸುವಂತೆ ಸಂಸತ್ತಿಗೆ ರಾಜಾಜ್ಞೆ ನೀಡಲಾಗಿತ್ತು.
Next Story