ಚಾಲಕನಿಲ್ಲದೆ 90 ಕಿ.ಮೀ. ಚಲಿಸಿ ಅಪಘಾತಕ್ಕೀಡಾದ ರೈಲು
ಸಿಡ್ನಿ, ನ.7: ಕಬ್ಬಿಣದ ಅದಿರು ತುಂಬಿದ್ದ ರೈಲೊಂದು ಚಾಲಕನಿಲ್ಲದೆ 90 ಕಿ.ಮೀ. ಚಲಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, 1 ಗಂಟೆಗಳ ಕಾಲ ಚಲಿಸಿದ ರೈಲು ಕೊನೆಗೆ ಹಳಿ ತಪ್ಪಿ ಅಪಘಾತಕ್ಕೀಡಾಗಿದೆ.
ಚಾಲಕ ತನ್ನ ಕ್ಯಾಬ್ ನಿಂದ ಇಳಿದು ರೈಲನ್ನು ಪರಿಶೀಲನೆ ನಡೆಸುತ್ತಿದ್ದಾಗ ರೈಲು ಏಕಾಏಕಿ ಚಲಿಸಿದೆ. ರೈಲು ಪೋರ್ಟ್ ಹೆಡ್ಲಾಂಡ್ ತಲುಪುವ ಮೊದಲೇ ಹಳಿ ತಪ್ಪಿಸಬೇಕೆಂದು ಗಣಿ ಸಂಸ್ಥೆ ಬಿಎಚ್ ಪಿ ನಿರ್ಧರಿಸಿತ್ತು. ಅದರಂತೆ ರೈಲು ಹಳಿ ತಪ್ಪಿಸಲಾಗಿದ್ದು, ರೈಲು ಅಪಘಾತಕ್ಕೀಡಾಗಿದೆ. ಇದರಿಂದ 1500 ಮೀಟರ್ ಹಳಿಗೆ ಹಾನಿಯಾಗಿದೆ.
Next Story