ಕ್ಯಾಲಿಫೋರ್ನಿಯ ಬಾರ್ನಲ್ಲಿ ಬಂದೂಕು ದಾಳಿ: ಡೆಪ್ಯುಟಿ ಶೆರಿಫ್ ಸೇರಿ 13 ಸಾವು
ಬಂದೂಕುಧಾರಿಯೂ ಹತ
ಕ್ಯಾಲಿಫೋರ್ನಿಯ, ನ. 8: ಲಾಸ್ ಏಂಜಲೀಸ್ನ ಕಂಟ್ರಿ ಮ್ಯೂಸಿಕ್ ಬಾರ್ ಮತ್ತು ಡ್ಯಾನ್ಸ್ ಹಾಲ್ನಲ್ಲಿ ಬುಧವಾರ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಶೆರಿಫ್ ಕಚೇರಿ ತಿಳಿಸಿದೆ.
ಓರ್ವ ಡೆಪ್ಯುಟಿ ಶೆರಿಫ್ ರಾನ್ ಹೆಲೂಸ್ ಮೃತರಲ್ಲಿ ಸೇರಿದ್ದಾರೆ.
ಅಲ್ಲಿ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮವೊಂದು ನಡೆಯುತ್ತಿತ್ತು ಹಾಗೂ ಹಲವು ನೂರು ಯುವಜನರು ಸೇರಿದ್ದರು ಎಂದು ವೆಂಚುರ ಕೌಂಟಿ ಶೆರಿಫ್ ಕಚೇರಿಯ ಕ್ಯಾಪ್ಟನ್ ಗ್ಯಾರೊ ಕುರೆಡ್ಜಿಯನ್ ತಿಳಿಸಿದರು.
ದಾಳಿಯಲ್ಲಿ ಬಂದೂಕುಧಾರಿಯೂ ಹತನಾಗಿದ್ದಾನೆ ಎಂದು ಅವರು ನುಡಿದರು.
ದಾಳಿಯ ಸುದ್ದಿ ತಿಳಿದು ಧಾವಿಸಿದ ಪೊಲೀಸರು ಬಂದೂಕುಧಾರಿಯನ್ನು ಎದುರಿಸಿದರು.
‘‘ಇದು ಭಯೋತ್ಪಾದನೆ ಕೃತ್ಯವೇ ಎನ್ನುವುದು ತಿಳಿದಿಲ್ಲ’’ ಎಂದು ಅಧಿಕಾರಿಯೊಬ್ಬರು ಹೇಳಿದರು.
Next Story