ಸೊಮಾಲಿಯದಲ್ಲಿ 62 ಉಗ್ರರ ಹತ್ಯೆ: ಅಮೆರಿಕ ಸೇನೆ
ನೈರೋಬಿ (ಕೆನ್ಯ), ಡಿ. 17: ಸೊಮಾಲಿಯದ ಬನಾದಿರ್ ಪ್ರಾಂತದಲ್ಲಿನ ಗಂಡರ್ಶ್ ಎಂಬಲ್ಲಿ ಶನಿವಾರ ಮತ್ತು ರವಿವಾರ ನಡೆಸಿದ ಆರು ವಾಯು ದಾಳಿಗಳಲ್ಲಿ 62 ಭಯೋತ್ಪಾದಕರನ್ನು ಕೊಂದಿರುವುದಾಗಿ ಅಮೆರಿಕದ ಸೇನೆ ಸೋಮವಾರ ತಿಳಿಸಿದೆ.
ಶನಿವಾರ ನಾಲ್ಕು ವಾಯು ದಾಳಿಗಳನ್ನು ನಡೆಸಲಾಗಿದ್ದು, 34 ಉಗ್ರರು ಹತರಾಗಿದ್ದಾರೆ ಹಾಗೂ ರವಿವಾರ ನಡೆದ ಇನ್ನೂ ಎರಡು ದಾಳಿಗಳಲ್ಲಿ 28 ಮಂದಿ ಮೃತರಾಗಿದ್ದಾರೆ ಎಂದು ಅಮೆರಿಕ ಸೇನೆಯ ಆಫ್ರಿಕ ಕಮಾಂಡ್ ತಿಳಿಸಿದೆ.
Next Story