ಪಾದಚಾರಿಗಳೆಡೆಗೆ ನುಗ್ಗಿದ ಹೈಜಾಕ್ ಆದ ಬಸ್: ಐವರು ಮೃತ್ಯು
21 ಮಂದಿಗೆ ಗಾಯ
ಬೀಜಿಂಗ್, ಡಿ.25: ದಾಳಿಕೋರನೊಬ್ಬ ಚೂರಿಯಿಂದ ಬೆದರಿಸಿ ಬಸ್ಸೊಂದನ್ನು ಹೈಜಾಕ್ ಮಾಡಲು ಯತ್ನಿಸಿದ್ದು, ಬಸ್ ಪಾದಚಾರಿಗಳೆಡೆಗೆ ನುಗ್ಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಆಗ್ನೇಯ ಚೀನಾದಲ್ಲಿ ಘಟನೆ ನಡೆದಿದ್ದು, 21 ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ದಾಳಿಕೋರನನ್ನು ಸೆರೆಹಿಡಿದಿದ್ದಾರೆ. ದುಷ್ಕರ್ಮಿಯು ಬಸ್ ಚಾಲಕನ ಮೇಲೆ ದಾಳಿ ನಡೆಸಿದಾಗ ಈ ಘಟನೆ ನಡೆದಿದೆ.
Next Story