ಸಿಂಗಾಪುರ ಹೊಟೇಲ್ನಲ್ಲಿ ಸ್ಫೋಟ, ಬೆಂಕಿ: ನೂರಾರು ಮಂದಿ ತೆರವು
ಸಿಂಗಾಪುರ, ಫೆ. 14: ಸಿಂಗಾಪುರದ ಹೊಟೇಲೊಂದರಲ್ಲಿ ಗುರುವಾರ ಸ್ಫೋಟಗಳು ಸಂಭವಿಸಿ ಬೆಂಕಿ ಕಾಣಿಸಿಕೊಂಡ ಬಳಿಕ, ನೂರಾರು ಮಂದಿಯನ್ನು ತೆರವುಗೊಳಿಸಲಾಯಿತು. ಇದರಿಂದಾಗಿ ಆ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ನಿಂತು ಹೋಯಿತು.
ಇದು ಭಯೋತ್ಪಾದಕ ದಾಳಿಯಲ್ಲ ಎಂಬುದಾಗಿ ಬಳಿಕ ಕಾರ್ಲ್ಟನ್ ಹೊಟೇಲ್ ತಿಳಿಸಿದೆ ಹಾಗೂ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದಿದೆ.
ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದ ಬಳಿಕ, ಹೊಟೇಲ್ ಕಟ್ಟಡದ ಹಿಂದಿನಿಂದ ದಟ್ಟ ಹೊಗೆಯು ಆಕಾಶಕ್ಕೆ ಹೋಗುತ್ತಿತ್ತು.
‘‘ಕಟ್ಟಡದಿಂದ ಸುಮಾರು ಒಂದು ಸಾವಿರ ಜನರನ್ನು ತೆರವುಗೊಳಿಸಲಾಯಿತು. ಯಾರೂ ಗಾಯಗೊಂಡಿಲ್ಲ’’ ಎಂದು ಸಿಂಗಾಪುರದ ನಾಗರಿಕ ರಕ್ಷಣಾ ಪಡೆ ತಿಳಿಸಿದೆ.
Next Story