ಪಾಕ್ ವಿದೇಶ ಕಚೇರಿ ವಕ್ತಾರರ ಟ್ವಿಟರ್ ಖಾತೆ ಸ್ಥಗಿತ
ಇಸ್ಲಾಮಾಬಾದ್, ಫೆ. 20: ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಸಲ್ರ ವೈಯಕ್ತಿಕ ಖಾತೆಯನ್ನು ‘ಟ್ವಿಟರ್’ ಅಮಾನತಿನಲ್ಲಿಟ್ಟಿದೆ.
ಭಾರತೀಯ ಅಧಿಕಾರಿಗಳು ಟ್ವಿಟರ್ಗೆ ದೂರು ನೀಡಿದ ಬಳಿಕ, ಮಂಗಳವಾರ ರಾತ್ರಿ ಅವರ ಖಾತೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ‘‘ಭಾರತೀಯ ದೌರ್ಜನ್ಯಗಳ’’ ಬಗ್ಗೆ ಹಾಗೂ ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯ ಬಗ್ಗೆ ಮಾಹಿತಿಗಳನ್ನು ತನ್ನ ಅನುಯಾಯಿಗಳಿಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಫೈಸಲ್ರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.
ಆದಾಗ್ಯೂ, ಮುಹಮ್ಮದ್ ಫೈಸಲ್ರ ಹೆಸರು ಹೊಂದಿರುವ ಪಾಕಿಸ್ತಾನ ವಿದೇಶ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆ ಸಕ್ರಿಯವಾಗಿದೆ.
Next Story