ಭಾರತದಲ್ಲಿ ಅಮೆರಿಕ ಉತ್ಪನ್ನಗಳಿಗೆ ಕರ ಭಾರ: ಮತ್ತೆ ಕಿಡಿಕಾರಿದ ಟ್ರಂಪ್
ಪರಸ್ಪರ ಸಹಮತದಿಂದ ತೆರಿಗೆ ವಿಧಿಸಲು ಆಗ್ರಹ
ವಾಶಿಂಗ್ಟನ್, ಮಾ.3: ಭಾರತವು ಅಮೆರಿಕದ ರಫ್ತು ಉತ್ಪನ್ನಗಳ ಮೇಲೆ ಅತ್ಯಧಿಕ ತೆರಿಗೆಗಳನ್ನು ವಿಧಿಸುತ್ತಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಉಭಯದೇಶಗಳು ಪರಸ್ಪರ ಸಹಮತದೊಂದಿಗೆ ತೆರಿಗೆಯನ್ನು ವಿಧಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.
‘‘ಭಾರತವು ಅತ್ಯಧಿಕ ತೆರಿಗೆಯನ್ನು ಹೇರುವ ರಾಷ್ಟ್ರವಾಗಿದೆ. ಅವರು ನಮಗೆ (ಅಮೆರಿಕ) ವಿಪರೀತ ತೆರಿಗೆ ವಿಧಿಸುತ್ತಿದ್ದಾರೆ’’ ಎಂದು ಮೇರಿಲ್ಯಾಂಡ್ನ ಕನ್ಸರ್ವೇಟಿವ್ ರಾಜಕೀಯ ಕ್ರಿಯಾ ಸಮಾವೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಕಿಡಿಕಾರಿದ್ದಾರೆ.
ಭಾರತವು ಅಮೆರಿಕದ ಉತ್ಪನ್ನಗಳಿಗೆ ಅತ್ಯಧಿಕ ತೆರಿಗೆ ವಿಧಿಸುತ್ತಿರುವುದಕ್ಕೆ ಉದಾಹರಣೆಯಾಗಿ ಟ್ರಂಪ್ ಅವರು ಶನಿವಾರ ಮತ್ತೊಮ್ಮೆ ಹಾರ್ಲೆ ಡೇವಿಡ್ಸನ್ ಬೈಕ್ಗಳ ಉದಾಹರಣೆಯನ್ನು ನೀಡಿದರು. ‘ಭಾರತಕ್ಕೆ ನಾವು ಮೋಟಾರ್ ಸೈಕಲನ್ನು ಕಳುಹಿಸುವಾಗ, 100 ಶೇಕಡ ತೆರಿಗೆಯನ್ನು ವಿಧಿಸಲಾಗುತ್ತದೆ’’ಆದರೆ ನಾವು ಅವರ ಉತ್ಪನ್ನಗಳಿಗೆ ‘ಬುದ್ಧಿವಂತಿಕೆಯಿಂದ’ ಯಾವುದೇ ತೆರಿಗೆ ವಿಧಿಸುವುದಿಲ್ಲ. ಹೀಗಾಗಿ, ನನಗೆ ಪರಸ್ಪರ ಸಹಮತದ ತೆರಿಗೆಯ ಅಥವಾ ಕನಿಷ್ಠ ಪಕ್ಷ ತೆರಿಗೆಯನ್ನಾದರೂ ವಿಧಿಸಲು ಬಯಸುತ್ತೇನೆ. ಅದನ್ನು ದರ್ಪಣ ತೆರಿಗೆಯೆಂದು ಕರೆಯಲಾಗುತ್ತದೆ ಹಾಗೂ ಅದು ಪರಸ್ಪರ ಸಹಮತದಿಂದ ಕೂಡಿರಬೇಕೆಂದು ಅವರು ಹೇಳುತ್ತಾರೆ.
ಆನಂತರ ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲೆ ‘ಪ್ರತೀಕಾರಾತ್ಮಕ’ ತೆರಿಗೆಗಳನ್ನು ವಿಧಿಸುವ ಬೆದರಿಕೆ ಹಾಕಿದ ಬಳಿಕ ಫೆಬ್ರವರಿ 2018ರಂದು ಭಾರತವು ಹ್ಯಾರ್ಲೆ ಡೇವಿಡ್ಸನ್ನಂತಹ ಆಮದು ಮಾಡಿದ ಮೋಟಾರು ಸೈಕಲ್ಗಳ ಮೇಲೆ ಕಸ್ಟಮ್ಸ್ ತೆರಿಗೆಯನ್ನು ಶೇ.50ರಷ್ಟು ಕಡಿತಗೊಳಿಸಿತ್ತು. ಭಾರತೀಯ ಬೈಕ್ಗಳ ಆಮದುಗಳ ಮೇಲೆ ಅಮೆರಿಕವು ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ ಮತ್ತು ಭಾರತದ ನೂತನ ತೆರಿಗೆಯ, ಅದರ ‘ನ್ಯಾಯಯುತವಲ್ಲದ’ ವಾಣಿಜ್ಯ ನಡವಳಿಕೆಗಳಿಗೆ ಉತ್ತಮ ಉದಾಹರಣೆಯಾಗಿದೆ ಎಂದರು.
ಟ್ರಂಪ್ ಅವರು 2017ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಸಂದರ್ಭದಲ್ಲಿ ಅಮೆರಿಕ ಕಾಂಗ್ರೆಸ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮೆರಿಕನ್ ಉತ್ಪನ್ನಗಳಿಗೆ ಭಾರತವು ಅಧಿಕ ತೆರಿಗೆಗಳನ್ನು ವಿಧಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹ್ಯಾರ್ಲೆ ಡೇವಿಡ್ಸನ್ ಮೋಟಾರ್ಬೈಕಗಳ ಮೇಲಿನ ಶೇ.50ರಷ್ಟು ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವ ಭಾರತದ ಘೋಷಿಸಿದ್ದರೂ, ಅಮೆರಿಕಕ್ಕೆ ಈತನಕ ಏನನ್ನೂ ದೊರೆತಿಲ್ಲವೆಂದು ಟ್ರಂಪ್ ಕಳೆದ ವರ್ಷ ಹೇಳಿದ್ದರು.