ಪಾಕಿಸ್ತಾನದಲ್ಲಿ ಬಾಂಬ್ ಸ್ಟೋಟ: 4 ಪೊಲೀಸರ ಸಾವು
ಕರಾಚಿ, ಮೇ 14: ಪಾಕಿಸ್ತಾನದ ಬಲೋಚಿಸ್ತಾನದ ಪ್ರಾಂತ್ಯದ ಮಸೀದಿಯೊಂದರ ಹೊರಗೆ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ನಾಲ್ವರು ಪೊಲೀಸರು ಮೃತಪಟ್ಟು, 11 ಮಂದಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕ್ವೆಟ್ಟಾದ ಸೆಟ್ ಲೈಟ್ ಪಟ್ಟಣದ ಮಸೀದಿಯಲ್ಲಿ ರಾತ್ರಿ ಪ್ರಾರ್ಥನೆಗೆ ಜನರು ಸೇರಿದ್ದಾಗ ಮಸೀದಿಯ ಹೊರಗಡೆ ಬಾಂಬ್ ದಾಳಿ ನಡೆದಿದೆ. ಇಲ್ಲಿ
ಕಳೆದ ಮೂರು ದಿನಗಳಲ್ಲಿ 2ನೇ ಬಾರಿ ಬಾಂಬ್ ಸ್ಟೋಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
Next Story