ಇರಾನ್: ಇರಾಕ್ ಗಡಿಯಲ್ಲಿ 5.7ರ ತೀವ್ರತೆಯ ಭೂಕಂಪ
ಟೆಹರಾನ್, ಜು. 8: ನೈರುತ್ಯ ಇರಾನ್ನಲ್ಲಿ ಇರಾಕ್ ಜೊತೆಗಿನ ಗಡಿ ಸಮೀಪ ರಿಕ್ಟರ್ ಮಾಪಕದಲ್ಲಿ 5.7ರ ತೀವ್ರತೆಯ ಭೂಕಂಪ ಸೋಮವಾರ ಸಂಭವಿಸಿದೆ ಎಂದು ಇರಾನ್ನ ರಾಷ್ಟ್ರೀಯ ಭೂಕಂಪ ಕೇಂದ್ರ ವರದಿ ಮಾಡಿದೆ.
ಭೂಕಂಪದ ಕೇಂದ್ರ ಬಿಂದು ಖುಜೆಸ್ತಾನ್ ಪ್ರಾಂತದ ಮಸ್ಜೀದ್ ಸುಲೈಮಾನ್ ಪ್ರದೇಶದಲ್ಲಿತ್ತು ಎಂದು ಅದು ಹೇಳಿದೆ.
ಭೂಕಂಪವು ಬೆಳಗ್ಗೆ 11.30ಕ್ಕೆ 17 ಕಿ.ಮೀ. ಆಳದಲ್ಲಿ ಸಂಭವಿಸಿದೆ.
ಭೂಕಂಪದಿಂದ ಸಂಭವಿಸಿರಬಹುದಾದ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಸರಕಾರಿ ಟಿವಿ ಹೇಳಿದೆ.
Next Story