ಸಿಐಎ ಬೇಹುಗಾರರ ಬಂಧನ ಸುಳ್ಳು: ಟ್ರಂಪ್
ವಾಶಿಂಗ್ಟನ್, ಜು. 23: ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎಗೆ ಸೇರಿದ 17 ಬೇಹುಗಾರರನ್ನು ಬಂಧಿಸಿದ್ದೇವೆ ಎಂಬ ಇರಾನ್ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಳ್ಳಿಹಾಕಿದ್ದಾರೆ.
''ಸಿಐಎ ಬೇಹುಗಾರರನ್ನು ಬಂಧಿಸಿದ್ದೇವೆ ಎಂಬ ಇರಾನ್ನ ಹೇಳಿಕೆ ಸಂಪೂರ್ಣ ಸುಳ್ಳು. ಶೂನ್ಯ ಸತ್ಯ'' ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
''ಇದು ಧಾರ್ಮಿಕ ಸರಕಾರವೊಂದು ಹರಡುತ್ತಿರುವ ಹೆಚ್ಚೆಚ್ಚು ಸುಳ್ಳುಗಳು ಮತ್ತು ಕೇವಲ ಪ್ರಚಾರ (ಹೊಡೆದುರುಳಿಸಲಾದ ಅವರ ಡ್ರೋನ್ನಂತೆ). ಅವರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಹಾಗೂ ಏನು ಮಾಡಬೇಕೆಂದು ಅವರಿಗೆ ಗೊತ್ತಾಗುತ್ತಿಲ್ಲ'' ಎಂದು ಅವರು ಹೇಳಿದ್ದಾರೆ.
Next Story