ಅಫ್ಘಾನ್: ಉಪಾಧ್ಯಕ್ಷ ಅಭ್ಯರ್ಥಿ ಕಚೇರಿಗೆ ದಾಳಿ; 20 ಸಾವು
ಕಾಬೂಲ್, ಜು. 29: ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಭ್ಯರ್ಥಿ ಅಮ್ರುಲ್ಲಾ ಸಾಲಿಹ್ರ ಕಚೇರಿಯಲ್ಲಿ ರವಿವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸರಕಾರ ತಿಳಿಸಿದೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರ ಜೊತೆಗೆ ಸ್ಪರ್ಧಿಸುತ್ತಿರುವ ಸಾಲಿಹ್ ಈ ದಾಳಿಯಲ್ಲಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ನಿಬಿಡ ಅವಧಿಯಲ್ಲಿ ಸಾಲಿಹ್ರ ನಾಲ್ಕು ಮಹಡಿಗಳ ಕಟ್ಟಡದ ದ್ವಾರದಲ್ಲಿ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡ ಬಳಿಕ, ಕಟ್ಟಡ ಪ್ರವೇಶಿಸಿದ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಆರು ಗಂಟೆಗೂ ಅಧಿಕ ಅವಧಿ ನಡೆದ ಕಾರ್ಯಾಚರಣೆಯಲ್ಲಿ 150ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story