ಸಿಖ್ ಮಹಿಳೆಗೆ ರಿಪಬ್ಲಿಕನ್ ಪಕ್ಷದ ಉನ್ನತ ಹುದ್ದೆ
ವಾಶಿಂಗ್ಟನ್, ಮೇ 3: ಕ್ಯಾಲಿಫೋರ್ನಿಯದ ಭಾರತೀಯ ಅಮೆರಿಕನ್ ಸಿಖ್ ವಕೀಲೆ ಹರ್ಮೀತ್ ಕೌರ್ ಧಿಲ್ಲೋನ್ (47) ರಿಪಬ್ಲಿಕನ್ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದ ಮಹತ್ವದ ಸ್ಥಾನವೊಂದಕ್ಕೆ ಆಯ್ಕೆಯಾಗಿದ್ದಾರೆ.
ಚಂಡೀಗಢ ಸಂಜಾತೆ ದಿಲ್ಲೋನ್ ರವಿವಾರ ನಡೆದ ಕ್ಯಾಲಿಫೋರ್ನಿಯ ರಿಪಬ್ಲಿಕನ್ ಪಾರ್ಟಿ ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ನೂತನ ಸದಸ್ಯೆಯಾಗಿ ಆಯ್ಕೆಯಾದರು. ಇದಕ್ಕೂ ಮೊದಲು ಅವರು ಕ್ಯಾಲಿಫೋರ್ನಿಯ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷರಾಗಿದ್ದರು. ಅವರು ಕ್ಯಾಲಿಫೋರ್ನಿಯ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದರು.
ರಾಷ್ಟ್ರೀಯ ಖ್ಯಾತಿಯ ಅಮೆರಿಕದ ವಕೀಲೆಯಾಗಿರುವ ಅವರು ಭಾರತದಲ್ಲಿ ಜನಿಸಿದರು. ಆದರೆ, ಅವರ ಹೆತ್ತವರು ಅಮೆರಿಕಕ್ಕೆ ವಲಸೆ ಹೋದ ಬಳಿಕ ಗ್ರಾಮೀಣ ಉತ್ತರ ಕ್ಯಾರಲೈನದಲ್ಲಿ ಬೆಳೆದರು.
Next Story