ಫೆಲೆಸ್ತೀನ್ ಬಾಲಕನನ್ನು ಜೀವಂತ ಸುಟ್ಟು ಕೊಂದ ತೀವ್ರವಾದಿ ಯಹೂದಿಗೆ ಇಸ್ರೇಲಿನಲ್ಲಿ ಆಜೀವ ಕಾರಾಗೃಹ ಶಿಕ್ಷೆ
ಟೆಲ್ಅವೀವ್, ಮೇ 5: ಹದಿನಾರು ವರ್ಷದ ಫೆಲೆಸ್ತೀನಿ ಬಾಲಕ ಮುಹಮ್ಮದ್ ಅಬ್ದುಲ್ ಖಾದರ್ನನ್ನು ಜೀವಂತ ಸುಟ್ಟು ಹಾಕದಿ ತೀವ್ರವಾದಿ ಯಹೂದಿ ವಿಭಾಗದ ನಾಯಕನಿಗೆ ಇಸ್ರೇಲ್ ಕೋರ್ಟ್ ಆಜೀವ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ. ಬಾಲಕನ ಕುಟುಂಬಕ್ಕೆ ಯಹೂದಿ ನಾಯಕನಾದ ಶಿಕ್ಷೆಗೊಳಗಾದ ಬಿನ್ ಡೇವಿಡ್ 39,000 ಡಾಲರ್ ನಷ್ಟ ಪರಿಹಾರ ನೀಡಬೇಕೆಂದು ಕೋರ್ಟ್ ತೀರ್ಪು ವಿಧಿಸಿದೆ.
ಈತನಿಗೆ ನೆರವಾದ ಇಬ್ಬರಿಗೆ ಈ ಮೊದಲೇ 21 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. 2014 ಜುಲೈಯ ಎರಡಕ್ಕೆ ಪೂರ್ವ ಜೆರುಸಲೇಂನ ಶೂಅಫತ್ ಗ್ರಾಮದಲ್ಲಿ ಮೂವರು ಸೇರಿ ಮುಹಮ್ಮದ್ ಅಬ್ದುಲ್ ಖಾದರ್ನನ್ನು ಜೀವಂತ ದಹಿಸಿದ್ದರು. ರಮಝಾನ್ ತಿಂಗಳ ಬೆಳಗ್ಗಿನ ನಮಾಝ್ ಗೆ ಹೊರಟು ಇತರರನ್ನು ದಾರಿಯಲ್ಲಿ ಕಾಯುತ್ತಾ ನಿಂತ ಸಂದರ್ಭದಲ್ಲಿ ಈ ಮೂವರ ತಂಡ ಬಂದಿತ್ತು. ಕಾರಿಗೆ ಹತ್ತಿಸಿಬಲವಂತದಿಂದ ಪೆಟ್ರೋಲ್ ಕುಡಿಯುವಂತೆ ಮಾಡಿ ಇಡೀ ಶರೀರಕ್ಕೆ ಸುರಿದು ನಂತರ ಬೆಂಕಿ ಕೊಟ್ಟಿತ್ತು. ಮೃತನಾದ ಬಳಿಕ ಬಾಲಕನನ್ನು ಜೆರುಸಲೇಂನಲ್ಲಿ ಮೈದಾನಕ್ಕೆಸೆದು ಹೋಗಿದ್ದರು. ಹೆಚ್ಚು ಸಮಯದ ನಂತರ ಪೊಲೀಸರು ಮೃತದೇಹವನ್ನು ಪತ್ತೆಹಚ್ಚಿದ್ದರು. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದರು. ಮಾನವಹಕ್ಕುಗಳ ಸಂಘಟನೆ ರಂಗಪ್ರವೇಶಿಸುವುದರೊಂದಿಗೆ ಒಂದು ವರ್ಷಕ್ಕೂ ಅಧಿಕ ಕಾಲ ನಡೆದ ವಿಚಾರಣೆಯಲ್ಲಿ ಕೊನೆಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ಲಭಿಸಿದೆಯೆಂದು ವರದಿಗಳು ತಿಳಿಸಿವೆ.