ಭಾರತಕ್ಕೆ ಮತ್ತೊಮ್ಮೆ ಬರುತ್ತಿದ್ದಾರೆ ರಾಜಕುಮಾರ ಚಾರ್ಲ್ಸ್
ಲಂಡನ್: ಬ್ರಿಟನ್ ರಾಜಕುಮಾರ ಚಾರ್ಲ್ಸ್ ಮುಂದಿನ ತಿಂಗಳು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಚಾರ್ಲ್ಸ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ನ. 13ರಂದು ದೆಹಲಿಗೆ ಆಗಮಿಸಲಿರುವ ಅವರು ಸುಸ್ಥಿರ ಮಾರುಕಟ್ಟೆ, ಹವಾಮಾನ ಬದಲಾವಣೆ ಮತ್ತು ಸಾಮಾಜಿಕ ಹಣಕಾಸು ಮತ್ತಿತರ ವಿಷಯಗಳ ಬಗ್ಗೆ ಮಾತುಕತೆ ನಡೆಸುವರು ಎಂದು ಅಧಿಕೃತ ಮೂಲಗಳು ಹೇಳಿವೆ.
ಚಾರ್ಲ್ಸ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು 10ನೇ ಬಾರಿ. ಪತ್ನಿ ಕೆಮ್ಮಿಲ್ಲಾ ಜತೆ 2017ರ ನವೆಂಬರ್ನಲ್ಲಿ ಭಾರತಕ್ಕೆ ಬಂದಿದ್ದರು. ಬ್ರಿಟನ್ ಇದೀಗ ಯೂರೋಪಿಯನ್ ಒಕ್ಕೂಟದಿಂದ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಜತೆ ವ್ಯಾಪಾರ ಸಂಬಂಧ ವೃದ್ಧಿಸಲು ಬ್ರಿಟನ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಚಾರ್ಲ್ಸ್ ಅವರ ಪುತ್ರ ವಿಲಿಯಂ ಹಾಗೂ ಸೊಸೆ ಕೇಟ್ ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸವನ್ನು ಇತ್ತೀಚೆಗೆ ಕೈಗೊಂಡಿದ್ದರು.
Next Story