ಜಾನ್ಸನ್ರಿಂದ ಈ ವಾರ ಸಂಸತ್ನಲ್ಲಿ ಬ್ರೆಕ್ಸಿಟ್ ಮಸೂದೆ ಮಂಡನೆ
ಲಂಡನ್, ಡಿ. 16: ಮುಂದಿನ ತಿಂಗಳು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಲು ಸಾಧ್ಯವಾಗುವಂತೆ ಪ್ರಧಾನಿ ಬೊರಿಸ್ ಜಾನ್ಸನ್ ಸರಕಾರ ಶುಕ್ರವಾರ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲು ಉದ್ದೇಶಿಸಿದೆ ಎಂದು ಪ್ರಧಾನಿಯ ವಕ್ತಾರ ಹೇಳಿದ್ದಾರೆ.
‘‘ನಾವು ಬ್ರೆಕ್ಸಿಟ್ ಪ್ರಕ್ರಿಯೆಯನ್ನು ಕ್ರಿಸ್ಮಸ್ ಮುನ್ನ ಆರಂಭಿಸಲು ಉದ್ದೇಶಿಸಿದ್ದೇವೆ. ಹೌಸ್ ಆಫ್ ಕಾಮನ್ಸ್ನ ಸ್ಪೀಕರ್ ಜೊತೆ ಚರ್ಚಿಸಿ ಸರಿಯಾದ ಸಾಂವಿಧಾನಿಕ ವಿಧಾನದ ಮೂಲಕ ನಾವು ಇದನ್ನು ಮಾಡಲಿದ್ದೇವೆ’’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಕ್ತಾರ ತಿಳಿಸಿದರು.
Next Story