ಬಗ್ದಾದ್ನ ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ ಎರಡು ಕ್ಷಿಪಣಿಗಳು
file photo
ಬಗ್ದಾದ್,ಜ.4: ಇರಾಕ್ ರಾಜಧಾನಿ ಬಗ್ದಾದ್ನಲ್ಲಿಯ ಅಮೆರಿಕದ ರಾಯಭಾರಿ ಕಚೇರಿಗೆ ಸಮೀಪದ ಗ್ರೀನ್ ರೆನ್ನಲ್ಲಿ ಶನಿವಾರ ಎರಡು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಅವಳಿ ಕ್ಷಿಪಣಿ ದಾಳಿಗಳ ಬೆನ್ನಿಗೇ ರಾಜತಾಂತ್ರಿಕರು ಮತ್ತು ಯೋಧರಿರುವ ಇಲ್ಲಿಯ ಅಮೆರಿಕದ ಕಚೇರಿಗಳ ಆವರಣಗಳಲ್ಲಿ ಸೈರನ್ಗಳು ಮೊಳಗಿದ್ದವು.
ಅಮೆರಿಕದ ಸೈನಿಕರಿರುವ ಅಲ್-ಬಲಾದ್ ವಾಯುಪಡೆ ನೆಲೆಯ ಮೇಲೆ ಎರಡು ರಾಕೆಟ್ಗಳ ಮೂಲಕ ದಾಳಿ ನಡೆದಿದೆ.
ಶುಕ್ರವಾರ ಬಾಗ್ದಾದ್ನಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನಿನ ಹಿರಿಯ ಸೇನಾಧಿಕಾರಿ ಜನರಲ್ ಕಾಸಿಂ ಸುಲೈಮಾನಿ ಕೊಲ್ಲಲ್ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ತನ್ನ ರಾಯಭಾರಿ ಕಚೇರಿ ಮತ್ತು ತನ್ನ ಸೈನಿಕರನ್ನು ನಿಯೋಜಿಸಲಾಗಿರುವ ಇರಾಕ್ನಾದ್ಯಂತ ನೆಲೆಗಳ ಮೇಲೆ ಪ್ರತಿದಾಳಿಯ ಬಗ್ಗೆ ಅಮೆರಿಕ ಆತಂಕಗೊಂಡಿದೆ.
Next Story