33 ಒಪ್ಪಂದಗಳಿಗೆ ಚೀನಾ, ಮ್ಯಾನ್ಮಾರ್ ಸಹಿ
ನೇಪಿಟಾವ್ (ಮ್ಯಾನ್ಮಾರ್), ಜ. 18: ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ 33 ಒಪ್ಪಂದಗಳಿಗೆ ಚೀನಾ ಮತ್ತು ಮ್ಯಾನ್ಮಾರ್ ಶನಿವಾರ ಸಹಿ ಹಾಕಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಮ್ಯಾನ್ಮಾರ್ನ ಸರಕಾರದ ಸಲಹೆಗಾರ್ತಿ ಆಂಗ್ ಸಾನ್ ಸೂ ಕಿ ನಡುವೆ ಮ್ಯಾನ್ಮಾರ್ ರಾಜಧಾನಿ ನೇಪಿಟಾವ್ನಲ್ಲಿ ಮಾತುಕತೆ ನಡೆದ ಬಳಿಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಎರಡು ದಿನಗಳ ಭೇಟಿಗಾಗಿ ಜಿನ್ಪಿಂಗ್ ಶುಕ್ರವಾರ ಮ್ಯಾನ್ಮಾರ್ಗೆ ಬಂದಿದ್ದಾರೆ. ಮ್ಯಾನ್ಮಾರ್ನಲ್ಲಿ ಚೀನಾ ಕೈಗೆತ್ತಿಕೊಳ್ಳಲಿರುವ ಮೂಲಸೌಕರ್ಯ ಯೋಜನೆಗಳು ಚೀನಾಕ್ಕೆ ಹಿಂದೂ ಮಹಾಸಾಗರವನ್ನು ತಲುಪಲು ದಾರಿ ಮಾಡಿಕೊಡುತ್ತವೆ ಎಂದು ಭಾವಿಸಲಾಗಿದೆ.
Next Story