ಯುರೋಪ್ಗೆ ಹರಡಿದ ಮಾರಕ ವೈರಸ್: ಫ್ರಾನ್ಸ್ನಲ್ಲಿ 3 ಪ್ರಕರಣಗಳು ಪತ್ತೆ
ಪ್ಯಾರಿಸ್, ಜ. 25: ಫ್ರಾನ್ಸ್ನಲ್ಲಿ ಮೂರು ಕೊರೋನವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಇದು ಯುರೋಪ್ನಲ್ಲೇ ಮೊದಲ ಬಾರಿಯಾಗಿದೆ.
ಫ್ರಾನ್ಸ್ನ ನೈರುತ್ಯದ ನಗರ ಬೋರ್ಡೋದ ಆಸ್ಪತ್ರೆಯೊಂದರಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಯಿತು ಹಾಗೂ ಇನ್ನೊಂದು ಪ್ರಕರಣ ಪ್ಯಾರಿಸ್ನಿಂದ ವರದಿಯಾಗಿದೆ ಎಂದು ಫ್ರಾನ್ಸ್ ಆರೋಗ್ಯ ಸಚಿವ ಆ್ಯಗ್ನೆಸ್ ಬಝಿನ್ ಸುದ್ದಿಗಾರರಿಗೆ ತಿಳಿಸಿದರು.
ಈ ಇಬ್ಬರ ಪೈಕಿ ಒಬ್ಬರ ನಿಕಟ ಸಂಬಂಧಿಯಾಗಿರುವ ಮೂರನೇ ವ್ಯಕ್ತಿಯೊಬ್ಬರು ಸೋಂಕು ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ಅವರು ನುಡಿದರು.
ಅವರೆಲ್ಲರೂ ಇತ್ತೀಚೆಗೆ ಚೀನಾಕ್ಕೆ ಪ್ರಯಾಣಿಸಿದ್ದರು.
Next Story