400 ಹುದ್ದೆ ಕಡಿತ ಮಾಡಿದ ಹಾಂಕಾಂಗ್ ಏರ್ಲೈನ್ಸ್
ಹಾಂಕಾಂಗ್, ಫೆ. 7: ಕೊರೋನವೈರಸ್ ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ, 400 ಹುದ್ದೆಗಳಿಗೆ ಕಡಿತ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹಾಂಕಾಂಗ್ ಏರ್ಲೈನ್ಸ್ ಶುಕ್ರವಾರ ತಿಳಿಸಿದೆ. ಉಳಿದಿರುವ ಸಿಬ್ಬಂದಿ ಕೂಡ ಸಂಬಳವಿಲ್ಲದ ರಜೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದಿದೆ.
ಈಗಾಗಲೇ ಸಮಸ್ಯೆಯಲ್ಲಿ ಸಿಲುಕಿರುವ ಹಾಂಕಾಂಗ್ನ ಎರಡನೇ ಸ್ಥಾನದಲ್ಲಿರುವ ವಾಯುಯಾನ ಸಂಸ್ಥೆಯು ಭೀಕರ ಸಾಂಕ್ರಾಮಿಕ ರೋಗದ ಬಳಿಕ ಸಂಕಷ್ಟಕ್ಕೆ ಸಿಲುಕಿದೆ.
ಕೊರೋನವೈರಸ್ ಹಿನ್ನೆಲೆಯಲ್ಲಿ, ಜಗತ್ತಿನಾದ್ಯಂತದ ದೇಶಗಳು ವಿಮಾನ ಪ್ರವೇಶಕ್ಕೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ವಿಮಾನ ಯಾನ ನಡೆಸುವುದು ದುಸ್ತರವಾಗಿದೆ ಎಂದು ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
Next Story