ಕೊರೊನಾ ಪೀಡಿತ ಮಹಿಳೆಗೆ ಹೆರಿಗೆ; ಮಗುವಿನಲ್ಲಿ ಸೋಂಕು ಇಲ್ಲ
ವುಹಾನ್ (ಚೀನಾ), ಫೆ. 11: ಚೀನಾದ ಶಾಂಕ್ಸಿ ರಾಜ್ಯದಲ್ಲಿ ಕೊರೋನವೈರಸ್ ಸೋಂಕಿಗೆ ಗುರಿಯಾಗಿರುವ ಮಹಿಳೆಯೊಬ್ಬರು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ, ಆದರೆ, ಮಗುವಿಗೆ ಸೋಂಕು ತಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಸಿಯಾನ್ನಲ್ಲಿರುವ ಕ್ಸಿಯಾನ್ ಜಿಯಾವೊಟೊಂಗ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಆಸ್ಪತ್ರೆಯಲ್ಲಿ 33 ವರ್ಷದ ಮಹಿಳೆ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಗುವಿಗೆ ಮೊದಲ ಕೊರೋನವೈರಸ್ ಪರೀಕ್ಷೆ ನಡೆಸಲಾಗಿದ್ದು, ಸೋಂಕು ಪತ್ತೆಯಾಗಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಇನ್ನೊಂದು ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story