ಜಪಾನ್: ಹಡಗಿನಲ್ಲಿ ಮೂವರು ಭಾರತೀಯರಿಗೆ ಕೊರೋನವೈರಸ್ ಸೋಂಕು
ಜಪಾನ್ನ ಕರಾವಳಿ ನಗರ ಯೊಕೊಹಾಮದಲ್ಲಿ ಲಂಗರು ಹಾಕಿರುವ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾದ ಭಾರತೀಯರ ಸಂಖ್ಯೆ ಶನಿವಾರ ಮೂರಕ್ಕೇರಿದೆ.
ಸೋಂಕುಪೀಡಿತ ಮೂವರು ಭಾರತೀಯರನ್ನು ರಾಯಭಾರ ಕಚೇರಿಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ ಹಾಗೂ ಸೋಂಕುಪೀಡಿತರು ವೈದ್ಯಕೀಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘‘ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಹಾಗೂ ಸುಧಾರಿಸುತ್ತಿದೆ. ಹಡಗಿನಲ್ಲಿರುವ ಎಲ್ಲ ಭಾರತೀಯರ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ಭಾರತೀಯ ರಾಯಭಾರ ಕಚೇರಿಯು ಸಂಬಂಧಪಟ್ಟ ಜಪಾನಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ’’ ಎಂದು ಅದು ತಿಳಿಸಿದೆ.
Next Story