ಚೀನಾದ ತಪ್ಪಿಗೆ ಜಗತ್ತು ದೊಡ್ಡ ಬೆಲೆ ತೆರುತ್ತಿದೆ: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್, ಮಾ. 20: ಮಾರಕ ಕೊರೋನವೈರಸ್ಗೆ ಸಂಬಂಧಿಸಿದ ಆರಂಭಿಕ ಮಾಹಿತಿಯನ್ನು ಚೀನಾ ಅಡಗಿಸಿಟ್ಟಿರುವುದಕ್ಕೆ ಜಗತ್ತು ಈಗ ದೊಡ್ಡ ಬೆಲೆಯನ್ನು ತೆರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.
‘‘ಈ ರೋಗದ ಬಗ್ಗೆ ನಮಗೆ ಕೆಲವು ತಿಂಗಳ ಮೊದಲೇ ತಿಳಿದಿದ್ದರೆ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತಿತ್ತು. ಆಗ ಅದನ್ನು ವೈರಸ್ ಆರಂಭಗೊಂಡ ಚೀನಾದ ಒಂದು ಪ್ರದೇಶಕ್ಕೇ ಸೀಮಿತಗೊಳಿಸಬಹುದಿತ್ತು’’ ಎಂದು ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.
‘‘ಅವರು (ಚೀನಾ) ಮಾಡಿರುವ ತಪ್ಪಿಗೆ ಜಗತ್ತು ದೊಡ್ಡ ಬೆಲೆಯನ್ನು ತೆರುತ್ತಿದೆ. ಕೊರೋನವೈರಸ್ ಕುರಿತ ಮಾಹಿತಿ ಹೊರಬಾರದಂತೆ ಚೀನಾ ಮಾಡಿರುವುದಕ್ಕೆ ಜಗತ್ತು ಅತಿ ದೊಡ್ಡ ಬೆಲೆ ತೆರುತ್ತಿದೆ’’ ಎಂದು ಟ್ರಂಪ್ ನುಡಿದರು.
Next Story