ಚೀನಾ: 2 ದಿನದಿಂದ ಸ್ಥಳೀಯರಲ್ಲಿ ಹೊಸ ಕೊರೋನ ಸೋಂಕಿಲ್ಲ
ಬೀಜಿಂಗ್, ಮಾ. 26: ಚೀನಾದಲ್ಲಿ ಸತತ ಎರಡನೇ ದಿನವೂ ಸ್ಥಳೀಯರು ಕೊರೋನವೈರಸ್ ಸೋಂಕಿಗೆ ಒಳಗಾಗಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ, ವಿದೇಶಿಯರು ಸೋಂಕಿಗೆ ಒಳಗಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಬುಧವಾರ ಮುಗಿಯುವ ಹೊತ್ತಿಗೆ ಒಟ್ಟು 67 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ದಿನಕ್ಕಿಂತ 47 ಹೆಚ್ಚಾಗಿದೆ. ಈ ಎಲ್ಲ ಪ್ರಕರಣಗಳು ವಿದೇಶಿಯರಿಗೆ ಸಂಬಂಧಪಟ್ಟದ್ದಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದರೊಂದಿಗೆ ಈಗ ಚೀನಾದಲ್ಲಿ ವರದಿಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 81,285ಕ್ಕೆ ಏರಿದೆ. ಬುಧವಾರ ಮುಗಿಯುವ ಹೊತ್ತಿಗೆ ಚೀನಾದಲ್ಲಿ ಒಟ್ಟು 3,287 ಸಾವುಗಳು ಸಂಭವಿಸಿವೆ ಎಂದು ಆಯೋಗ ತಿಳಿಸಿದೆ.
Next Story