ಬ್ರಿಟನ್: ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡಿ ಅದೇ ಸೋಂಕಿಗೆ ಬಲಿಯಾದ ಮೂವರು ವೈದ್ಯರು
ಮೂವರು ಹುತಾತ್ಮರನ್ನು ಕೊಂಡಾಡಿದ ಗಣ್ಯಾತಿಗಣ್ಯರು
ಬ್ರಿಟನ್, ಮಾ. 31 : ಇಂಗ್ಲೆಂಡ್ ನಲ್ಲಿ ಕೊರೊನ ಹಾವಳಿ ವ್ಯಾಪಕವಾಗಿರುವಂತೆಯೇ ಅಲ್ಲಿ ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಮೂವರು ವೈದ್ಯರು ಸೋಂಕಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವ ದುಃಖದ ಸುದ್ದಿ ಬಂದಿದೆ.
ಡಾ. ಹಬೀಬ್ ಝೈದಿ, ಡಾ. ಆದಿಲ್ ಅಲ್ ತಯರ್ , ಡಾ. ಅಮ್ಜದ್ ಅಲ್ ಹವ್ರಾನಿ ಅವರು ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡುತ್ತಾ ಅದೇ ಸೋಂಕಿಗೆ ಬಲಿಯಾದ ಮೊದಲ ಮೂವರು ವೈದ್ಯರು ಎಂದು ತಿಳಿದು ಬಂದಿದೆ. ಈ ಮೂವರೂ ಆಫ್ರಿಕಾ ಮತ್ತು ಏಷ್ಯಾ ಮೂಲದವರು.
ಈ ಮೂವರು ವೈದ್ಯರ ಮಹಾ ತ್ಯಾಗದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಗಣ್ಯಾತಿಗಣ್ಯರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಹ್ಯಾರಿ ಪಾಟರ್ ಖ್ಯಾತಿಯ ಲೇಖಕಿ ಜೆ ಕೆ ರೌಲಿಂಗ್ ಈ ಮೂವರು ಹುತಾತ್ಮ ವೈದ್ಯರ ಕುರಿತ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ವಲಸಿಗರು, ಅವರ ಮಕ್ಕಳು, ಮೊಮ್ಮಕ್ಕಳು ಈ ದೇಶಕ್ಕಾಗಿ ಮತ್ತು ಇಲ್ಲಿನ ಅರೋಗ್ಯ ವ್ಯವಸ್ಥೆಗೆ ಇಂತಹ ಮಹಾನ್ ಕೊಡುಗೆ ನೀಡಿದ್ದಾರೆ ಎಂಬುದನ್ನು ಈ ದೇಶ ಎಂದೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
Three NHS doctors have sadly passed away after contracting COVID-19.
— Zarah Sultana MP (@zarahsultana) March 29, 2020
My heart goes out to the loved ones of Dr Amged El-Hawrani, Dr Adil El-Tayar and Dr Habib Zaidi.
And to all our frontline NHS staff: thank you for your courage & self-sacrifice ♥️
#notevenwhenweresavinglives - I wonder if the Mirror felt that there would be less sympathy for NHS workers if they left the colours of healthcare professionals in the original stock photo. Well spotted by Mohammed Sadiq, more here: https://t.co/yJEk943Kow pic.twitter.com/hBzAoTHvD3
— Dr Asim Qureshi (@AsimCP) March 29, 2020
RIP. May we NEVER forget what immigrants, and their children and grandchildren, have given this country, especially our health service. https://t.co/3JLSilO4BD
— J.K. Rowling (@jk_rowling) March 29, 2020