ಕುಟುಂಬ ಸದಸ್ಯರೊಂದಿಗೆ ಬೀಚ್ಗೆ ಹೋದ ನ್ಯೂಝಿಲ್ಯಾಂಡ್ ಸಚಿವಗೆ ಹಿಂಭಡ್ತಿ
ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಎ. 7: ಕೊರೋನವೈರಸ್ ಹರಡುವುದನ್ನು ತಡೆಯಲು ಜಾರಿಗೆ ತರಲಾಗಿರುವ ಬೀಗಮುದ್ರೆಯ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ನ್ಯೂಝಿಲ್ಯಾಂಡ್ನ ಆರೋಗ್ಯ ಸಚಿವರಿಗೆ ಹಿಂಭಡ್ತಿ ನೀಡಲಾಗಿದೆ ಹಾಗೂ ತಾರಾ ರಗ್ಬಿ ಆಟಗಾರನೊಬ್ಬನನ್ನು ಖಂಡಿಸಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ, ಕೆಲ ದಿನಗಳ ಹಿಂದೆ ಆರೋಗ್ಯ ಸಚಿವ ಡೇವಿಡ್ ಕ್ಲಾರ್ಕ್ ಮೌಂಟನ್ ಬೈಕಿಂಗ್ ಹೋಗಿದ್ದರು. ಅದಾದ ಕೆಲವೇ ದಿನಗಳ ಬಳಿಕ, ತನ್ನ ಕುಟುಂಬ ಸದಸ್ಯರೊಂದಿಗೆ 20 ಕಿಲೋಮೀಟರ್ ದೂರದ ಸಮುದ್ರ ದಂಡೆಗೆ ನಡಿಗೆಗಾಗಿ ತೆರಳಿದ್ದರು.
ಇದಕ್ಕಾಗಿ ತನ್ನನ್ನು ತಾನೇ ‘ಮೂರ್ಖ’ ಎಂದು ಕರೆದುಕೊಂಡ ಕ್ಲಾರ್ಕ್ರಿಂದ ಸಹಾಯಕ ಹಣಕಾಸು ಸಚಿವ ಹುದ್ದೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಅದೇ ವೇಳೆ, ಆಲ್ ಬ್ಲಾಕ್ ರಿಚಿ ಮೋಂಗ ಸೋಮವಾರ ತನ್ನ ತಂಡದ ಸದಸ್ಯರೊಂದಿಗೆ ತರಬೇತಿ ನಡೆಸುತ್ತಿರುವುದು ಕಂಡುಬಂದಿದೆ. ಅದಕ್ಕಾಗಿ ಅವರನ್ನು ನ್ಯೂಝಿಲ್ಯಾಂಡ್ ರಗ್ಬಿ ಮುಖ್ಯ ಕಾರ್ಯನಿರ್ವಾಹಕ ರಾಬಿನ್ಸನ್ ಖಂಡಿಸಿದ್ದಾರೆ.
Next Story