ಭಾರತದ ಜೊತೆ ರೈಲು ಮಾರ್ಗ ಸಂಪರ್ಕಕ್ಕೆ ಚೀನಾ ಯೋಜನೆ
ಬೀಜಿಂಗ್, ಮೇ 24: ಟಿಬೆಟ್ ಮಾರ್ಗವಾಗಿ ನೇಪಾಳಕ್ಕೆ ತನ್ನ ರಸ್ತೆ ಹಾಗೂ ರೈಲು ಜಾಲವನ್ನು ಹರಡುವ ಯೋಜನೆಯನ್ನು ಹಮ್ಮಿಕೊಂಡಿರುವ ಚೀನಾವು, ಇದೀಗ ಭಾರತದ ಬಿಹಾರ ರಾಜ್ಯದವರೆಗೂ ತನ್ನ ರೈಲು ಸಂಪರ್ಕವನ್ನು ವಿಸ್ತರಿಸಲು ಯೋಚಿಸುತ್ತಿದೆಯೆಂದು, ಸರಕಾರಿ ಸ್ವಾಮ್ಯದ ಚೀನಿ ಮಾಧ್ಯಮವೊಂದು ವರದಿ ಮಾಡಿದೆ. ಗಡಿಯಾಚೆಯಿಂದ ನೇಪಾಳದ ರಸುವಾಗಂಧಿ ಪ್ರದೇಶಕ್ಕೆ ರೈಲು ಸಂಪರ್ಕವನ್ನು ಸ್ಥಾಪಿಸುವ ಬಗ್ಗೆ ಆ ಎರಡೂ ದೇಶಗಳು ಈಗಾಗಲೇ ಸಮಾಲೋಚನೆ ನಡೆಸಿವೆ ಚೀನಾದ ಪ್ರಸ್ತಾವಿತ ರೈಲುಮಾರ್ಗವು 2020ರೊಳಗೆ ನೇಪಾಳದ ಗಡಿಯನ್ನು ತಲುಪಲಿದೆಯೆಂದು ಚೀನಾದ 'ಗ್ಲೋಬಲ್ ಟೈಮ್ಸ್' ಪತ್ರಿಕೆಯ ವರದಿಯೊಂದು ತಿಳಿಸಿದೆ. ಈ ರೈಲು ಮಾರ್ಗವನ್ನು ನೇಪಾಳದ ರಸುವಾಗಂಧಿಯಿಂದ, 240 ಕಿ.ಮೀ. ದೂರದ ಬಿಹಾರದ ಗಡಿಪ್ರದೇಶದಲ್ಲಿರುವ ಬಿರುಗುಂಜ್ವರೆಗೆ ವಿಸ್ತರಿಸಿದಲ್ಲಿ, ಭಾರತದ ಜೊತೆ ಸುಲಭವಾಗಿ ರೈಲು ಸಂಪರ್ಕವನ್ನು ಹೊಂದಲು ಚೀನಕ್ಕೆ ಸಾಧ್ಯವಾಗಲಿದೆಯೆಂದು ವರದಿ ತಿಳಿಸಿದೆ.
Next Story