ಇರಾಕ್ನಲ್ಲಿರುವ ಕುರ್ದ್ ನೆಲೆಗಳ ಮೇಲೆ ಟರ್ಕಿ ದಾಳಿ
ಅಂಕಾರ (ಟರ್ಕಿ), ಜೂ. 15: ಟರ್ಕಿಯ ಯುದ್ಧ ವಿಮಾನಗಳು ಸೋಮವಾರ ಉತ್ತರ ಇರಾಕ್ನಲ್ಲಿರುವ ಟರ್ಕಿಯ ಕುರ್ದ್ ಬಂಡುಕೋರರನ್ನು ಗುರಿಯಾಗಿಸಿ ವಾಯು ದಾಳಿ ನಡೆಸಿದವು ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ.
ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಅಥವಾ ಪಿಕೆಕೆಯನ್ನು ಗುರಿಯಾಗಿಸಿ ಟರ್ಕಿಯು ಆಗಾಗ್ಗೆ ಗಡಿಯಾಚೆಯ ವಾಯುದಾಳಿಗಳನ್ನು ನಡೆಸುತ್ತಿದೆ. ಪಿಕೆಕೆಯು ಉತ್ತರ ಇರಾಕ್ನಲ್ಲಿ ನೆಲೆಗಳನ್ನು ಹೊಂದಿವೆ.
ಆಶ್ರಯ ಸ್ಥಾನಗಳು ಮತ್ತು ಗುಹೆಗಳು ಸೇರಿದಂತೆ ಪಿಕೆಕೆಯ 81 ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಸೇನೆಯ ಟ್ವೀಟ್ ತಿಳಿಸಿದೆ.
ಯುದ್ಧ ವಿಮಾನಗಳು ನಾಗರಿಕರಿಗೆ ಹಾನಿಯಾಗದಂತೆ ಗರಿಷ್ಠ ಎಚ್ಚರಿಕೆಯನ್ನು ತೆಗೆದುಕೊಂಡಿವೆ ಹಾಗೂ ತಮ್ಮ ನೆಲೆಗಳಿಗೆ ಸುರಕ್ಷಿತವಾಗಿ ಮರಳಿವೆ ಎಂದು ಸಚಿವಾಲಯ ಹೇಳಿದೆ.
Next Story