ಅಮೆರಿಕ ಭಾರತವನ್ನು ಪ್ರೀತಿಸುತ್ತದೆ: ಟ್ರಂಪ್
ವಾಶಿಂಗ್ಟನ್, ಜು. 5: ಅಮೆರಿಕದ 244ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿರುವ ಅಭಿನಂದನೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಶನಿವಾರ ಪ್ರಧಾನಿ ಮೋದಿ ಈ ರೀತಿಯಾಗಿ ಟ್ವೀಟ್ ಮಾಡಿದ್ದರು: ‘‘ಅಮೆರಿಕದ 244ನೇ ಸ್ವಾತಂತ್ರ್ಯ ದಿಜದ ಸಂದರ್ಭದಲ್ಲಿ ನಾನು ಡೊನಾಲ್ಡ್ ಟ್ರಂಪ್ರನ್ನು ಮತ್ತು ಅಮೆರಿಕದ ಜನತೆಯನ್ನು ಅಭಿನಂದಿಸುತ್ತೇನೆ. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಗಳಾಗಿ, ಈ ದಿನ ಆಚರಿಸಲಾಗುವ ಸ್ವಾತಂತ್ರ್ಯ ಮತ್ತು ಮಾನವ ಸಾಹಸವನ್ನು ನಾವು ಎತ್ತಿಹಿಡಿಯುತ್ತೇವೆ’’.
ಮೋದಿಯ ಅಭಿನಂದನೆಗಳಿಗೆ ಉತ್ತರಿಸಿದ ಟ್ರಂಪ್, ‘‘ಧನ್ಯವಾದ ಗೆಳೆಯ. ಅಮೆರಿಕ ಭಾರತವನ್ನು ಪ್ರೀತಿಸುತ್ತದೆ’’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಜುಲೈ 4ರ ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ದಕ್ಷಿಣ ಡಕೋಟದಲ್ಲಿ ನಡೆದ ಸಮಾರಂಭದಲ್ಲಿ ಟ್ರಂಪ್ ಭಾಗವಹಿಸಿದರು.
Next Story