ಲೆಬನಾನ್ ವಿರುದ್ಧ ಇಸ್ರೇಲ್ನ ಯುದ್ಧ ಬೆದರಿಕೆ
ಜೆರುಸಲೇಂ, ಜೂನ್, 18: ಲೆಬನಾನ್ನ ಹಿಝ್ಬುಲ್ಲಾದೊಂದಿಗೆ ಯುದ್ಧವೇನಾದರೂ ನಡೆದರೆ ಆ ರಾಷ್ಟ್ರವನ್ನು ಮತ್ತೊಂದು ಸಿರಿಯ ಆಗಿ ಪರಿವರ್ತಿಸಲಿದೆ ಎಂದು ಇಸ್ರೇಲ್ ಬೆದರಿಕೆಯೊಡ್ಡಿದೆ. ಈರೀತಿ ಯುದ್ಧಕ್ಕೆ ಸಿದ್ಧವಾಗಿರಿ ಎಂಬ ಪರೋಕ್ಷ ಸಂದೇಶವನ್ನು ಇಸ್ರೇಲ್ನ ಮಿಲಿಟರಿ ಇಂಟಲಿಜೆನ್ಸ್ ಮುಖ್ಯಸ್ಥ ಹರ್ಸಲ್ ಹಾಲೆವಿ ನೀಡಿದ್ದಾರೆ. ಇಂತಹ ಯುದ್ಧವೊಂದರಿಂದ ಆಗುವ ಪರಿಣಾಮದಿಂದ ಇಸ್ರೇಲ್ ಅತಿಬೇಗನೆ ಸುಧಾರಿಸಿಕೊಳ್ಳುವುದು ಎಂದೂ ಅವರು ಹೇಳಿದ್ದಾರೆ.
’ನಮಗೆ ಹಿಝ್ಬುಲ್ಲಾದ ಕುರಿತು ಉಪಯುಕ್ತ ಮಾಹಿತಿಗಳು ದೊರಕಿವೆ. ಈಗಾಗಲೇ ಲೆಬನಾನ್ ಗಡಿಯಲ್ಲಿ ಹಲವು ಬಾರಿ ಸೈನಿಕ ತರಬೇತಿ ನಡೆಸಿದ್ದೇವೆ . ಗಾಝಾದಲ್ಲಿ ಹಮಾಸ್ ಸರಕಾರವನ್ನು ಪ್ರತಿರೋಧಿಸುವುದಕ್ಕಾಗಿ ಯುದ್ಧವೂ ನಡೆಯಲಿದೆ ಎಂದು ಹೆಸರು ಬಹಿರಂಗಗೊಳಿಸಲಿಚ್ಛಿಸದ ಇಸ್ರೇಲ್ನ ಹಿರಿಯ ಸೇನಾಧಿಕಾರಿ ವಿವರಿಸಿದ್ದಾರೆ.
Next Story