ರಾಸಲ್ಖೈಮ: ಪತಿಯ ಗುಂಡೇಟಿಗೀಡಾದ ಪತ್ನಿ ಮೃತ್ಯು
ರಾಸಲ್ಖೈಮ,ಜುಲೈ 25: ಪತಿಯ ಗುಂಡೇಟಿಗೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ವದೇಶಿ ಮಹಿಳೆ ಅಬುಧಾಬಿಯ ಖಲೀಫ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಅವರು ಮೃತರಾದರು ಎಂದು ವರದಿಯಾಗಿದೆ. ಘಟನೆಯ ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಪತಿ ಈಗಲೂ ಕಸ್ಟಡಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.
ಜುಲೈ ಒಂಬತ್ತರಂದು ಪತಿ ತನ್ನ ನಲ್ವತ್ತು ವರ್ಷದ ಪತ್ನಿಗೆ ಹಲವು ಬಾರಿಗುಂಡು ಹಾರಿಸಿದ್ದ. ನಂತರ ಆತ ಮಾಮುರ ಪೊಲೀಸ್ಠಾಣೆಗೆ ಹೋಗಿ ಶರಣಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಸಖರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯಸಚಿವ ಅಬ್ದುರ್ರಹ್ಮಾನ್ ಅಲ್ ಉವೈಸಿಯವರ ಸಲಹೆ ಪ್ರಕಾರ ತಜ್ಞ ಚಿಕಿತ್ಸೆಗೆಂದು ಅಬುಧಾಬಿಗೆ ಕರೆತರಲಾಗಿತ್ತು. ಅಬುಧಾಬಿಖಲೀಫಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಶನಿವಾರದಂದು ಮೃತರಾದರೆಂದು ತಿಳಿದುಬಂದಿದೆ. ಮಹಿಳೆಯ ಪತಿಯನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದರೂ ಕೊಲೆಕೃತ್ಯಕ್ಕೆ ಕಾರಣವೇನೆಂದು ಆತ ತಿಳಿಸಿಲ್ಲ ಎನ್ನಲಾಗಿದೆ. ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.