ಲಿಂಗನಿರ್ಣಯ ಹಕ್ಕುವಾದ ಕುಟುಂಬ ವ್ಯವಸ್ಥೆಯ ವಿರುದ್ಧದ ಜಾಗತಿಕ ಯುದ್ಧ: ಪೋಪ್ಫ್ರಾನ್ಸಿಸ್
ಅಟ್ಲಾಂಟ, ಅಕ್ಟೋಬರ್ 3: ಲಿಂಗನಿರ್ಣಯ ಹಕ್ಕು(ಜೆಂಡರ್ ಥಿಯರಿ) ವಾದ ವಿವಾಹಸಂಬಂಧ ಮತ್ತು ಕುಟುಂಬ ವೆಂಬ ಪವಿತ್ರ ಸಂಸ್ಥೆಯ ವಿರುದ್ಧ ಹೂಡಲಾದ ಜಾಗತಿಕ ಯುದ್ಧವೆಂದು ಪೋಪ್ಫ್ರಾನ್ಸಿಸ್ ಆದಿತ್ಯವಾರ ಜಾರ್ಜಿಯದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಕ್ರೈಸ್ತವಿಶ್ವಾಸಿಗಳನ್ನು ಭೇಟಿಯಾದ ವೇಳೆ ಪೋಪ್ ಫ್ರಾನ್ಸಿಸ್ ಲಿಂಗ ನಿರ್ಣಯವಾದವನ್ನು ಬಲವಾಗಿ ಖಂಡಿಸಿದ್ದಾರೆ.
ಜೆಂಡರ್ ಥಿಯರಿ ಎಂದರೆ ಒಬ್ಬ ವ್ಯಕ್ತಿ ದೈಹಿಕವಾಗಿ ಸ್ತ್ರೀ ಅಥವಾ ಪುರುಷವಾಗಿದ್ದರೂ ಆ ವ್ಯಕ್ತಿ ತನ್ನನ್ನು ಸ್ತ್ರೀ, ಪುರುಷ, ಅವೆರಡೂ, ಅವೆರಡೂ ಅಲ್ಲ ಎಂದು ತನ್ನನ್ನು ಗುರುತಿಸಿ ಕೊಳ್ಳುವ ಹಕ್ಕು.
ವಿವಾಹ ಎಂಬ ಸಂಬಂಧವನ್ನು ನಾಶಪಡಿಸಲಿಕ್ಕಾಗಿ ಜಾಗತಿಕ ಯುದ್ಧ ನಡೆಯಲಾರಂಭಿಸಿದೆ. ಇದಕ್ಕೆ ಆಯುಧವನ್ನು ಬಳಸುತ್ತಿಲ್ಲ ಆಶಯಗಳನ್ನು ಬಳಸಲಾಗುತ್ತಿದೆ.ಇಂತಹ ಆಶಯಿಕವಾದ ವಸಾಹತುಶಾಹೀಕರಣವನ್ನು ವಿರೋಧಿಸಲು ಭಿನ್ನಲಿಂಗಿಗಳ ಕುರಿತು ಉದಾರ ನಿಲುವು ಹೊಂದಿರುವ ಪೋಪ್ ಕರೆ ನೀಡಿದ್ದಾರೆ.
ಹೆಚ್ಚುತ್ತಿರುವ ವಿವಾಹವಿಚ್ಛೇದನಗಳು ಕುಟುಂಬ ಎಂಬ ಸಂಸ್ಥೆಗೆ ಬೆದರಿಕೆಯಾಗಿದೆ. ಸಲಿಂಗಿಳ ವಿವಾಹವನ್ನು ಕಾನೂನುಬದ್ಧಗೊಳಿಸಲು ಮುಂದಾದ ಸರಕಾರದ ಕ್ರಮವನ್ನು ವಿರೋಧಿಸಿ ಮೆಕ್ಸಿಕೊದಲ್ಲಿ ನಡೆದ ಪ್ರತಿಭಟನೆಯನ್ನು ಕಳೆದ ವಾರ ಪೋಪ್ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು ಎಂದು ವರದಿ ತಿಳಿಸಿದೆ.