ಅಫ್ಘಾನ್ ಸೇನಾ ಹೆಲಿಕಾಪ್ಟರ್ ಪತನ: ಕನಿಷ್ಠ 8 ಸೈನಿಕರ ಮೃತ್ಯು
ಕಾಬೂಲ್,ಅ.9: ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್ ಪ್ರಾಂತ್ಯದಲ್ಲಿ ರವಿವಾರ ಮುಂಜಾನೆ ಸೇನಾ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಎಂಟು ಮಂದಿ ಅಫ್ಘಾನ್ ಸೈನಿಕರು ಸಾವನ್ನಪ್ಪಿದ್ದಾರೆ. ಸೇನಾನೆಲೆಯೊಂದಕ್ಕೆ ಆಹಾರ, ಶಸ್ತ್ರಾಸ್ತ್ರ ಮತ್ತಿತರ ಸಾಮಾಗ್ರಿಗಳನ್ನು ಪೂರೈಕೆ ಮಾಡಲು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತೆಂದು ಅಫ್ಘಾನ್ ಸೇನಾ ವಕ್ತಾರ ದಾವ್ಲಾತ್ ವಝೀರಿ ತಿಳಿಸಿದ್ದಾರೆ. ಹೆಲಿಕಾಪ್ಟರನ್ನು ತಾವು ಹೊಡೆದುರುಳಿಸಿದ್ದೇವೆಂಬ ತಾಲಿಬಾನ್ ಬಂಡುಕೋರರ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿಯೇ ಹೆಲಿಕಾಪ್ಟರ್ ಪತನಗೊಂ ಡಿರುವುದಾಗಿ ದಾವ್ಲಾತ್ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ತಾಲಿಬಾನ್ ವಕ್ತಾರ ಝಬಿನುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಸೇನಾ ಹೆಲಿಕಾಪ್ಟರನ್ನು ಬಂಡುಕೋರರು ಹೊಡೆದುರುಳಿಸಿರುವುದಾಗಿ ಹೇಳಿದ್ದಾನೆ.
Next Story