ಜೈಲು ಒಡೆದು 174 ಕೈದಿಗಳು ಪರಾರಿ
ಕಾವಲುಗಾರನ ಹತ್ಯೆ
ಅರ್ಕಾಹೈ (ಹೈಟಿ), ಅ. 23: ಉತ್ತರ ಹೈಟಿಯ ಜೈಲೊಂದರ ಹೆಚ್ಚಿನ ಕೈದಿಗಳು ಶನಿವಾರ ಕಾವಲುಗಾರನೋರ್ವನನ್ನು ಕೊಂದು ಪರಾರಿಯಾಗಿದ್ದಾರೆ ಹಾಗೂ ತಮ್ಮಾಂದಿಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪರಾರಿಯಾಗಿರುವ 174 ಕೈದಿಗಳಿಗಾಗಿ ಅಧಿಕಾರಿಗಳು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸೈನಿಕರ ನೆರವಿನೊಂದಿಗೆ ಶೋಧ ಆರಂಭಿಸಿದ್ದಾರೆ.
ಜೈಲಿನಿಂದ ಹೊರಹೋಗುವ ರಸ್ತೆಗಳನ್ನು ಬಂದ್ ಮಾಡಿರುವ ಪೊಲೀಸರು ಗುರುತು ಚೀಟಿಗಳಿಲ್ಲದ ಹಲವಾರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜೈಲಿನಿಂದ ಪರಾರಿಯಾಗುವ ಹಂತದಲ್ಲೇ 11 ಮಂದಿಯನ್ನು ಬಂಧಿಸಲಾಗಿದೆ. ಕಾವಲುಗಾರರು ಬಳಸುವ ಪ್ರದೇಶವೊಂದಕ್ಕೆ ನುಗ್ಗಿದ ಕೈದಿಗಳು ಕನಿಷ್ಠ ಐದು ಬಂದೂಕುಗಳನ್ನು ಕಸಿದುಕೊಂಡು ಓಡಿದ್ದಾರೆ. ಈ ಹಂತದಲ್ಲಿ ಓರ್ವ ಕಾವಲುಗಾರನನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ
Next Story