ಬಿಲ್ ಇಂಗ್ಲಿಷ್ ನ್ಯೂಝಿಲ್ಯಾಂಡ್ ನೂತನ ಪ್ರಧಾನಿ
ವೆಲಿಂಗ್ಟನ್, ಡಿ. 8: ಬಿಲ್ ಇಂಗ್ಲಿಷ್ ನ್ಯೂಝಿಲ್ಯಾಂಡ್ನ ನೂತನ ಪ್ರಧಾನಿಯಾಗಲಿದ್ದಾರೆ. ಈ ವಾರ ಪ್ರಧಾನಿ ಹುದ್ದೆಗೆ ಜಾನ್ ಕೀ ದಿಢೀರ್ ರಾಜೀನಾಮೆ ಘೋಷಿಸಿದ ಹಿನ್ನೆಲೆಯಲ್ಲಿ ನೂತನ ನೇಮಕ ನಡೆದಿದೆ.
ಪ್ರಧಾನಿ ಹುದ್ದೆಗೆ ಇತರ ಇಬ್ಬರು ಸ್ಪರ್ಧಿಗಳು ಇದ್ದರೂ, ಸಂಸತ್ತಿನಲ್ಲಿ ಬಿಲ್ 58 ಸಂಸದರ ಬೆಂಬಲ ಹೊಂದಿರುವ ಹಿನ್ನೆಲೆಯಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಬಿಲ್ ಇಂಗ್ಲಿಷ್ರ ಕನ್ಸರ್ವೇಟಿವ್ ಪಕ್ಷದ ಕಾಕಸ್ ಸೋಮವಾರ ಸಭೆ ಸೇರಲಿದ್ದು, ಕೀ ಅವರ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ಆರಿಸಲಿದೆ.
ಬಿಲ್ ಇಂಗ್ಲಿಷ್ ಎಂಟು ವರ್ಷಗಳ ಕಾಲ ಕೀ ಅವರ ನಂಬಿಕಸ್ತ ಉಪ ಪ್ರಧಾನಿಯಾಗಿದ್ದರು ಹಾಗೂ ತಾನು ಹೊಂದಿದ್ದ ಹಣಕಾಸು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು.
Next Story