ಹಿರಿಯ ರಷ್ಯನ್ ರಾಜತಾಂತ್ರಿಕ ಶವವಾಗಿ ಪತ್ತೆ
ಅಂಕಾರಾ, ಡಿ.21: ಟರ್ಕಿಯಲ್ಲಿ ರಷ್ಯಾದ ರಾಯಭಾರಿಯಾಗಿದ್ದ ಆಂಡ್ರೆ ಕರ್ಲೋವ್ ಅವರನ್ನು ಗುಂಡಿಟ್ಟು ಕೊಂದ 24 ಗಂಟೆಗಳ ಒಳಗಾಗಿ, ರಷ್ಯಾದ ಹಿರಿಯ ರಾಜತಾಂತ್ರಿಕ ಪೆಟ್ರ್ ಪೋಸ್ಕಿಕೋವ್ (56) ಅವರ ಶವ ಪತ್ತೆಯಾಗಿದೆ.
ರಷ್ಯಾದ ಅವರ ನಿವಾಸದಲ್ಲಿ ಶವ ಪತ್ತೆಯಾಗಿದ್ದು, ಗುಂಡಿನ ದಾಳಿಯ ಗುರುತುಗಳು ಶವದ ಮೇಲಿವೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಅವರ ಮನೆಯ ಸ್ನಾನಗೃಹ ಸಿಂಕ್ ಅಡಿಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ರಷ್ಯಾದ ರಾಜಧಾನಿಯ ಬಲಕ್ಲೋವಸ್ಕಿ ಪ್ರೊಸ್ಪೆಕ್ಟ್ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಟಿವಿ ವಾಹಿನಿಯ ಪ್ರಕಾರ, ದೇಹದ ಪಕ್ಕದಲ್ಲಿ ಎರಡು ಖಾಲಿ ಗುಂಡುಗಳು ಕೂಡಾ ಪತ್ತೆಯಾಗಿವೆ. ಇವರು ಹಿರಿಯ ರಾಜತಾಂತ್ರಿಕ ಸಿಬ್ಬಂದಿ ಎಂದಷ್ಟೇ ಬಹಿರಂಗಪಡಿಸಲಾಗಿದ್ದು, ಇವರ ಹುದ್ದೆ ಯಾವುದು ಎಂದು ಪ್ರಕಟಿಸಿಲ್ಲ. ಅವರ ಹತ್ಯೆ ವೇಳೆ ಪತ್ನಿಯೂ ಅಪಾರ್ಟ್ಮೆಂಟ್ನಲ್ಲಿ ಇದ್ದರು ಎನ್ನಲಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಪೊಶಿಕೊವ್ ಅವರು ಬೊಲಿವಿಯಾ ರಾಜಭಾರಿಯಾಗಿ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ರಷ್ಯಾದ ವಿದೇಶಾಂಗ ಸಚಿವಾಲಯದ ಯುಎಸ್-ಲ್ಯಾಟಿನ್ ವಿಭಾಗದ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.