ಅತಿಥಿಯ ಮುಖಕ್ಕೆ ಕಚ್ಚಿದ ಒಬಾಮರ ನಾಯಿ
ವಾಶಿಂಗ್ಟನ್, ಜ. 14: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಮನೆಗೆ ಅತಿಥಿಯಾಗಿ ಹೋಗಿದ್ದ 18 ವರ್ಷದ ಹುಡುಗಿಯ ಮುಖಕ್ಕೆ ಒಬಾಮರ ಸಾಕು ನಾಯಿ ‘ಸನ್ನಿ’ ಕಚ್ಚಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.ಹುಡುಗಿಯು ಸೋಮವಾರ 4 ವರ್ಷ ಪ್ರಾಯದ ಪೋರ್ಚುಗೀಸ್ ವಾಟರ್ ನಾಯಿಯ ಬೆನ್ನು ತಟ್ಟಲು ಹೋದಾಗ ಅದು ಆಕೆಯ ಕಣ್ಣಿನ ಕೆಳಗೆ ಮುಖಕ್ಕೆ ಕಚ್ಚಿದೆ ಎಂದು ಟಿಎಂಝಡ್.ಕಾಮ್ ವರದಿ ಮಾಡಿದೆ.
ಒಬಾಮರ ಕುಟುಂಬ ವೈದ್ಯ ಡಾ. ರಾನಿ ಜಾಕ್ಸನ್ ಹುಡುಗಿಗೆ ಚಿಕತ್ಸೆ ನೀಡಿದರು. ಮುಖಕ್ಕೆ ಹೊಲಿಗೆಗಳನ್ನು ಹಾಕಲಾಗಿದೆ.
Next Story