'ಪತ್ರಕರ್ತರು ಜಗತ್ತಿನಲ್ಲಿ ಅತ್ಯಂತ ಅಪ್ರಾಮಾಣಿಕರು'
ಡೊನಾಲ್ಡೊ ಟ್ರಂಪ್ ಆರೋಪ
ವಾಷಿಂಗ್ಟನ್, ಜ.22: ಜಗತ್ತಿನಲ್ಲಿ ಪತ್ರಕರ್ತರು ಅತ್ಯಂತ ಅಪ್ರಾಮಾಣಿಕರು ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡೊ ಟ್ರಂಪ್ ಆರೋಪಿಸಿದ್ದಾರೆ.
ಮಾಧ್ಯಮಗಳ ವಿರುದ್ಧ ನನ್ನ ಯುದ್ಧ ಚಾಲ್ತಿಯಲ್ಲಿರುತ್ತದೆ ಎಂದು ಹೇಳಿರುವ ಟ್ರಂಪ್, ತಾನು ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕಾರದ ವೇಳೆ ಹೆಚ್ಚು ಜನರು ಸೇರಿರಲಿಲ್ಲ ಎಂದು ಕೆಲವು ಮಾಧ್ಯಮಗಳು ಸುಳ್ಳು ವರದಿ ಮಾಡಿವೆ ಎಂದು ಹೇಳಿದ್ದಾರೆ.
‘‘ನಾನು ಅಧ್ಯಕ್ಷ ಪದವಿ ಸ್ವೀಕರಿಸಿದ ಸಂದರ್ಭದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ನಾನು ಇಂದು ಬೆಳಗ್ಗೆ ನೆಟ್ವರ್ಕ್ವೊಂದನ್ನು ನೋಡಿದಾಗ ಅದರಲ್ಲಿ ತಾನು ಪ್ರಮಾಣವಚನ ಸ್ವೀಕರಿಸಿದಾಗ ಜನರೇ ಸೇರಿಲ್ಲ ಎಂದು ಖಾಲಿ ಜಾಗದ ಚಿತ್ರ ಹಾಕಿದ್ದನ್ನು ನೋಡಿದೆ. ಆದರೆ, ಮಾಧ್ಯಮ ವರದಿ ಸುಳ್ಳು. ನಾನು ಪ್ರಮಾಣವಚನ ಸ್ವೀಕರಿಸಿದ್ದನ್ನು ಸುಮಾರು ಒಂದೂವರೆ ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಭಾಂಗಣದಲ್ಲಿ ಮಾತ್ರವಲ್ಲ, ವಾಷಿಂಗ್ಟನ್ ಸ್ಮಾರಕದ ಸೇರಿದಂತೆ ಬೀದಿ ಬದಿಯಲ್ಲೂ ಜನರು ಕಿಕ್ಕಿರಿದು ಸೇರಿದ್ದರು’’ ಎಂದು ಟ್ರಂಪ್ ಹೇಳಿದ್ದಾರೆ.
Next Story