ಐಸಿಸ್ ನಿಗ್ರಹಿಸದೆ ಅನ್ಯ ದಾರಿಯಿಲ್ಲ: ಟ್ರಂಪ್
ವಾಶಿಂಗ್ಟನ್,ಜ.22: ಐಸಿಸ್ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡದೆ ಅಮೆರಿಕಕ್ಕೆ ಬೇರೆ ದಾರಿಯಿಲ್ಲವೆಂದು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಶನಿವಾರ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎನ ಮುಖ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಹಿಂದಿನ ಇತರ ಯಾವುದೇ ಯುದ್ಧಗಳಿಗಿಂತ ದೀರ್ಘವಾದ ಕಾಳಗದಲ್ಲಿ ನಾವು ಈಗ ಹೋರಾಡುತ್ತಿದ್ದೇವೆ. ನಮ್ಮ ಬಳಿಯಿರುವ ನೈಜ ಸಾಮಾರ್ಥ್ಯವನ್ನು ನಾವು ಉಪಯೋಗಿಸಿಕೊಂಡಿಲ್ಲ. ನಮ್ಮನ್ನು ನಿಯಂತ್ರಿಸಲಾಗಿದೆ’’ ಎಂದವರು ಹೇಳಿದ್ದಾರೆ.
ಐಸಿಸ್ ಒಂದು ದುಷ್ಟ ಶಕ್ತಿಯಾಗಿದ್ದು, ಅದನ್ನು ಕೊನೆಗೊಳಿಸಬೇಕಾಗಿದೆ. ಅದರ ಅಂತ್ಯಕ್ಕೆ ಇದು ಸಕಾಲವಾಗಿದೆ ಎಂದು ಟ್ರಂಪ್ ಹೇಳಿದರು.
Next Story