ಹಾರುತ್ತಿದ್ದ ವಿಮಾನದಿಂದ ದೂಡಿಹಾಕಿ ಕೊಲೆ !
ಮೆಕ್ಸಿಕೊ,ಎ. 13: ಮೆಕ್ಸಿಕೊದ ಸಿನಾಲೊವದಲ್ಲಿ ವಿಮಾನ ಹಾರಾಟದ ವೇಳೆ ಯುವಕನನ್ನು ಕೆಳಗೆ ದೂಡಿಹಾಕಿ ಕೊಲೆಗೈಯ್ಯಲಾಗಿದೆ. ಮೃತದೇಹ ಆಸ್ಪತ್ರೆಯೊಂದರ ಮೇಲ್ಛಾವಣಿಯಲ್ಲಿ ಪತ್ತೆಯಾಗಿದೆ ಎಂದು ಮೆಕ್ಸಿಕೊದ ಡೆಪ್ಯುಟಿ ಜನರಲ್ ಜೀಸ್ ಮಾರ್ಟಿನ್ ರಾಬಿಲ್ಸ್ ದೃಢಪಡಿಸಿದ್ದಾರೆ. ಮೃತದೇಹದಲ್ಲಿ ಗಾಯಗಳಾಗಿದ್ದವು. ಆದರೆ ವಿಮಾನದಿಂದ ಕೆಳಗೆ ದೂಡಿಹಾಕಿದ ಕೂಡಲೇ ವ್ಯಕ್ತಿ ಮೃತನಾಗಿರುವನೇ ಎಂದುಸ್ಪಷ್ಟವಾಗಿಲ್ಲ ಎಂದು ಆವರು ಹೇಳಿದ್ದಾರೆ.
ಸ್ಥಳೀಯ ಸಮಯ 7:30ಕ್ಕೆ ಘಟನೆ ನಡೆದಿದೆ. ಆಸ್ಪತ್ರೆಯ ಹೊರಗೆ ನಿಂತಿದ್ದ ವ್ಯಕ್ತಿ ಘಟನೆಯನ್ನು ಮೊದಲು ನೋಡಿದ್ದಾನೆ. ಆಸ್ಪತ್ರೆಯ ಮೇಲೆ ತಗ್ಗಿನಲ್ಲಿ ಹಾರಾಟನಡೆಸಿದ ವಿಮಾನದಿಂದ ಒಬ್ಬನನ್ನು ಕೆಳಗೆ ದೂಡಿಹಾಕಲಾಯಿತೆಂದು ಪ್ರತ್ಯಕ್ಷ ದರ್ಶಿ ಪೊಲೀಸರಿಗೆ ವಿವರಿಸಿದ್ದಾನೆ.
ಅರುವತ್ತು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಎರಡು ಮೃತದೇಹಗಳು ಕೂಡಾ ಪತ್ತೆಯಾಗಿವೆ. ಮಾದಕವಸ್ತು ಮಾಫಿಯಾ ಇವರನ್ನು ಬಲಿಪಡೆದಿದೆ ಎಂದು ಮೆಕ್ಸಿಕೊದ ಸಾರ್ವಜನಿಕಾರೋಗ್ಯ ವಿಭಾಗ ತಿಳಿಸಿದೆ. ಕೃಷಿ ಪ್ರದೇಶವಾಗಿದ್ದು, ಕೃಷಿಗೆ ಔಷಧ ಸಿಂಪಡಿಸುವ ಕ್ಷೇತ್ರದಲ್ಲಿ ಘಟನೆ ನಡೆದಿದೆ.
ಮೂವರನ್ನು ಒಂದೇ ವಿಮಾನದಿಂದ ಹೊರಗೆ ದಬ್ಬಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.