ವಿಕಿಲೀಕ್ಸ್ ವಿರೋಧಿ ಗುಪ್ತಚರ ಸಂಸ್ಥೆ : ಸಿಐಎ
ವಾಶಿಂಗ್ಟನ್, ಎ. 14: ವಿಕಿಲೀಕ್ಸ್ ಎನ್ನುವುದು ವಿರೋಧಿ ಗುಪ್ತಚರ ಸಂಸ್ಥೆಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ) ನಿರ್ದೇಶಕ ಮೈಕ್ ಪಾಂಪಿಯೊ ಗುರುವಾರ ಬಣ್ಣಿಸಿದ್ದಾರೆ. ಅದು ಪ್ರಜಾಸತ್ತಾತ್ಮಕ ದೇಶಗಳಿಗೆ ಬೆದರಿಕೆಯೊಡ್ಡುತ್ತದೆ ಹಾಗೂ ಸರ್ವಾಧಿಕಾರಿಗಳೊಂದಿಗೆ ಕೈಜೋಡಿಸುತ್ತದೆ ಎಂದು ಅವರು ಹೇಳಿದ್ದಾರೆ.
‘‘ವಿಕಿಲೀಕ್ಸ್ ವಿರೋಧಿ ಗುಪ್ತಚರ ಸೇವೆಯಂತೆ ಕೆಲಸ ಮಾಡುತ್ತಿದೆ. ಗುಪ್ತಚರ ಮಾಹಿತಿಯನ್ನು ಪಡೆಯುವುದಕ್ಕಾಗಿ ಅದರ ಹಿಂಬಾಲಕರು ಸಿಐಎಯಲ್ಲಿ ಕೆಲಸ ಮಾಡುತ್ತಿದ್ದಾರೆ’’ ಎಂದು ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಅವರು ಹೇಳಿದರು.
Next Story