ಕೊಲಂಬಿಯ: ಪ್ರವಾಹಕ್ಕೆ ಮತ್ತೆ 8 ಬಲಿ
ಬೊಗೊಟ (ಕೊಲಂಬಿಯ), ಎ. 20: ಮಧ್ಯ ಕೊಲಂಬಿಯದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ರೆಡ್ಕ್ರಾಸ್ ಬುಧವಾರ ತಿಳಿಸಿದೆ.
ನೂರಾರು ಮಂದಿಯನ್ನು ಬಲಿತೆಗೆದುಕೊಂಡ ಭೂಕುಸಿತದಿಂದ ದೇಶ ಚೇತರಿಸುತ್ತಿರುವಾಗಲೇ ಅಪ್ಪಳಿಸಿದ ಇನ್ನೊಂದು ಪಾಕೃತಿಕ ದುರಂತದಿಂದ ಜನರು ಬೆಚ್ಚಿ ಬಿದ್ದಿದ್ದಾರೆ.
ಮನಿಝೇಲ್ಸ್ ನಗರದಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಹ ಉದ್ಭವಿಸಿದ ಬಳಿಕ ಕನಿಷ್ಠ 20 ಮಂದಿ ನಾಪತ್ತೆಯಾಗಿದ್ದಾರೆ. ಹಾಗಾಗಿ, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
Next Story