ನೈಜೀರಿಯಾದಲ್ಲಿ ಬೋಕೊಹರಾಮ್ ದಾಳಿ ಮೂವತ್ತು ಮಂದಿ ಹತ್ಯೆ
ಕಾನೋ: ಉತ್ತರ ನೈಜೀರಿಯಾದ ಎರಡು ಗ್ರಾಮಗಳಲ್ಲಿ ಬೋಕೊಹರಾಮ್ ದಾಳಿಯಲ್ಲಿ ಸುಮಾರು 30 ಮಂದಿ ಮೃತರಾಗಿದ್ದಾರೆ. ದಾಳಿಯಲ್ಲಿ ಮೃತರಾದವರ ಸಂಖ್ಯೆಯನ್ನು ತಿಳಿಸುತ್ತ ನೈಜೀರಿಯಾದ ಅಧ್ಯಕ್ಷ ಮುಹಮ್ಮದ್ ಬುಹಾರಿ ಬೋಕೊಹರಾಮ್ ಸಂಘಟನೆಯ ವಿರುದ್ದ ನೈಜೀರಿಯ ಒಂದು ಹಂತದವರೆಗೆ ಯಶಸ್ವಿಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದೆ ಎಂದು ಹೇಳಿದ್ದಾರೆ.
ಬೋಕೊ ಹರಾಮ್ ವಿರುದ್ಧ ಹೋರಾಟಕ್ಕೆ ಸೇನೆಗೆ ನೆರವು ನೀಡುವ ಸ್ಥಳೀಯ ಸಮಿತಿಯೊಂದು ಬೋಕೊ ಹರಾಮ್ನ ಸದಸ್ಯರು ಬೈಕ್ ಮತ್ತು ವ್ಯಾನ್ಗಳಲ್ಲಿ ಬಂದು ಬಂದೂಕು ಚಾಕು ಇತ್ಯಾದಿಗಳಿಂದ ದಾಳಿ ಮಾಡಿದ್ದಾರೆ ಎಂದು ಹೇಳಿದೆ. ದಾಳಿಕೋರರು ಶುಕ್ರವಾರ ರಾತ್ರಿ ಮತ್ತು ನಿನ್ನೆ ಬೆಳಗ್ಗೆ ಗ್ರಾಮದ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು ಮೂವತ್ತು ಮಂದಿಯನ್ನು ಕೊಂದಿದ್ದಾರೆ ಮತ್ತು ದೋಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ಸಮಿತಿ ತಿಳಿಸಿದೆ.
Next Story