ಅಮೆರಿಕದ ಅಧ್ಯಕ್ಷನಾಗುವೆ : ಡ್ವಾಯ್ನಾ ಜಾನ್ಸನ್
ಲಾಸ್ ಏಂಜಲಿಸ್, ಮೇ 11: ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಇಂಗಿತವನ್ನು ಕುಸ್ತಿಪಟು ಹಾಗೂ ಹಾಲಿವುಡ್ ನಟ ಡ್ವಾಯ್ನಾ ಜಾನ್ಸನ್ (ರಾಕ್) ವ್ಯಕ್ತಪಡಿಸಿದ್ದಾರೆ.
‘ಜಿಕ್ಯೂ’ ಮ್ಯಾಗಝಿನ್ಗೆ ಸಂದರ್ಶನ ನೀಡಿದ 45 ವರ್ಷದ ನಟ, ಅಮೆರಿಕದ ಅತ್ಯುನ್ನತ ಹುದ್ದೆಗೆ ಸ್ಪರ್ಧಿಸಲು ತಾನು ನಿರ್ಧರಿಸಿದರೆ ಯಾರಿಗೂ ಅಚ್ಚರಿಯಾಗಬಾರದು ಎಂದು ಹೇಳಿದ್ದಾರೆ.
‘ದ ಮಮ್ಮಿ ರಿಟರ್ನ್ಸ್’ (2001) ಮತ್ತು ‘ದ ಸ್ಕಾರ್ಪಿಯನ್ ಕಿಂಗ್’ (2002) ಮುಂತಾದ ಭಾರೀ ಜನಪ್ರಿಯ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ.
Next Story